Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಕ್ಯುಆರ್ ಕೋಡ್‌ ಬಳಸಿ 58.85 ಲಕ್ಷ ರೂ. ವಂಚಿಸಿದ ಪೆಟ್ರೋಲ್ ಬಂಕ್ ಸೂಪರ್ ವೈಸರ್

ಮಂಗಳೂರು: ಕ್ಯುಆರ್ ಕೋಡ್‌ ಬಳಸಿ 58.85 ಲಕ್ಷ ರೂ. ವಂಚಿಸಿದ ಪೆಟ್ರೋಲ್ ಬಂಕ್ ಸೂಪರ್ ವೈಸರ್

- Advertisement -
- Advertisement -

ಮಂಗಳೂರು: ಕ್ಯುಆರ್ ಕೋಡ್‌ ಬಳಸಿ ಪೆಟ್ರೋಲ್ ಬಂಕ್ ಸೂಪರ್ ವೈಸರ್ ಒಬ್ಬ 58.85 ಲಕ್ಷ ರೂ. ವಂಚಿಸಿದ ಘಟನೆ ಬಂಗ್ರಕೂಳೂರಿನ ರಿಲಯನ್ಸ್ ಔಟ್‌ಲೆಟ್ ಫ್ಯುಯೆಲ್ ಬಂಕ್‌ನಲ್ಲಿ ನಡೆದಿದೆ. ಮೋಹನದಾಸ್ ವಂಚಿಸಿದ ಸೂಪರ್ ವೈಸರ್.

ಬಂಗ್ರಕೂಳೂರಿನ ರಿಲಯನ್ಸ್ ಔಟ್‌ಲೆಟ್ ಫ್ಯುಯೆಲ್ ಬಂಕ್‌ನ ಹಣಕಾಸು ವ್ಯವಹಾರ ನಿರ್ವಹಣೆಯ ಜವಾಬ್ದಾರಿಯನ್ನು  ಮೋಹನದಾಸ್ ನೋಡಿಕೊಂಡಿದ್ದ. ಈತ 2023ರ ಮಾ.1ರಿಂದ ಜು.31ರವರೆಗೆ ಪೆಟ್ರೋಲ್ ಬಂಕ್‌ನಲ್ಲಿ ಬಂಕ್‌ನ ಕ್ಯುಆರ್ ಕೋಡ್ ತೆಗೆದು ವೈಯಕ್ತಿಯ ಖಾತೆಯ ಕ್ಯುಆರ್ ಕೋಡ್‌ನ್ನು ಅಳವಡಿಸಿ ಗ್ರಾಹಕರಿಗೆ ಬಂಕ್‌ನದ್ದೇ ಕ್ಯು ಆರ್ ಕೋಡ್ ಎಂದು ನಂಬಿಸಿ 58,85,333 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ರಿಲಯನ್ಸ್ ಔಟ್‌ಲೆಟ್ ಫ್ಯುಯೆಲ್ ಬಂಕ್‌ ನ ಮ್ಯಾನೇಜ‌ರ್ ನಗರದ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!