Sunday, June 7, 2026
Homeಕರಾವಳಿಮಂಗಳೂರು ಸುಳ್ಯ; ಸೊಸೈಟಿಯಿಂದ ಖರೀದಿಸಿ ಹೊರಗಡೆ ಇಟ್ಟಿದ್ದ 50 ಕೆಜಿ ಅಕ್ಕಿ ಕಳ್ಳತನ

 ಸುಳ್ಯ; ಸೊಸೈಟಿಯಿಂದ ಖರೀದಿಸಿ ಹೊರಗಡೆ ಇಟ್ಟಿದ್ದ 50 ಕೆಜಿ ಅಕ್ಕಿ ಕಳ್ಳತನ

- Advertisement -
- Advertisement -

ಸುಳ್ಯ; ಸೊಸೈಟಿಯಿಂದ ಖರೀದಿಸಿ ಹೊರಗಡೆ ಇಟ್ಟಿದ್ದ 50 ಕೆಜಿ ಅಕ್ಕಿಯನ್ನು ಯಾರೋ ಕಳ್ಳತನ  ಮಾಡಿರುವ ಘಟನೆ ಸುಳ್ಯದ ದುಗ್ಗಲಡ್ಕದಲ್ಲಿ ನಡೆದಿದೆ.

ಕಲ್ಮಡ್ಕ ಚೇತನ್ ಎಂಬವರು ಎ.21ದು  ಮುಂಜಾನೆ  10 ಗಂಟೆ ಸುಮಾರಿಗೆ ರೇಶನ್ ಖರೀದಿಗೆ ದುಗ್ಗಲಡ್ಕ ಸಿ.ಎ.ಬ್ಯಾಂಕ್ ಶಾಖೆಗೆ ಬಂದಿದ್ದರು. ಅಲ್ಲಿ ರೇಶನ್ ಖರೀದಿಸಿ 50ಕೆಜಿ ಅಕ್ಕಿಯನ್ನು ಸೊಸೈಟಿಯ ಹೊರಗಿರಿಸಿ ರಿಕ್ಷಾ ತರುತ್ತೇನೆಂದು ಹೋಗಿದ್ದರು.

ನಂತರ ಬಂದು ನೋಡಿದಾಗ  ಅಕ್ಕಿಯ ಕಟ್ಟು ಕಾಣೆಯಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಸಿ.ಎ.ಬ್ಯಾಂಕ್ ಗೆ ದೂರು ಹೋಗಿದ್ದು, ಪರಿಶೀಲನೆಗೆ ಸಿಬ್ಬಂದಿಯನ್ನು ಕಳುಹಿಸಿರುವುದಾಗಿ ತಿಳಿದುಬಂದಿದೆ. ಉಚಿತವಾಗಿ ಸಿಗುವ ಅಕ್ಕಿಯನ್ನು ಕೊಂಡೊಯ್ದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ.

- Advertisement -

Latest News

error: Content is protected !!