Sunday, May 5, 2024
Homeತಾಜಾ ಸುದ್ದಿಕೊರೊನಾದಿಂದ ಮೃತಪಟ್ಟ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಐವರು ಮಕ್ಕಳೂ ಕೋವಿಡ್ ಗೆ ಬಲಿ

ಕೊರೊನಾದಿಂದ ಮೃತಪಟ್ಟ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಐವರು ಮಕ್ಕಳೂ ಕೋವಿಡ್ ಗೆ ಬಲಿ

spot_img
- Advertisement -
- Advertisement -

ಜಾರ್ಖಂಡ್: ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೊರೊನಾ ಸಾಕಷ್ಟು ಅನಾಹುತಕ್ಕೆ ಕಾರಣವಾಗುತ್ತಲೇ ಇದೆ. ಅದೆಷ್ಟೋ ಊಹೆಗೂ ನಿಲುಕದ ಘಟನೆಗಳು ನಡೆಯುತ್ತಲೇ ಇದೆ. ಇದೀಗ ಇಂತಹದ್ದೇ ಘಟನೆಗೆ ಜಾರ್ಖಂಡ್ ಸಾಕ್ಷಿಯಾಗಿದೆ. ಜಾರ್ಖಂಡ್‌ನ ಧನ್ಬಾದ್‌ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.

ಕೊರೊನಾ ಪೀಡಿತ ತಾಯಿಯ ಅಂತ್ಯಕ್ರಿಯೆಯಲ್ಲಿ ಆರು ಜನ ಮಕ್ಕಳು ಪಾಲ್ಗೊಂಡಿದ್ದರು. ತಾಯಿಯ ಹೆಣವನ್ನು ಮಕ್ಕಳು ಭುಜದ ಮೇಲೆ ಹೊತ್ತಿದ್ದರು. ಆದರೆ ತಾಯಿಯ ಮರಣದ ನಂತರ 5 ಗಂಡು ಮಕ್ಕಳು ಒಬ್ಬೊಬ್ಬರಾಗಿ ಸಾವನ್ನಪ್ಪಿದ್ದಾರೆ. ಆರನೇ ಮಗನ ಸ್ಥಿತಿ ಗಂಭೀರವಾಗಿದೆ. ಕೊರೊನಾ ವೈರಸ್ ಸೋಂಕು ಕುಟುಂಬವನ್ನೇ ಬಲಿ ಪಡೆದಿದೆ. ಈ ಕುಟುಂಬದ 6 ಸದಸ್ಯರು ಈವರೆಗೆ ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ.

ಧನ್ಬಾದ್ ನಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಇದುವರೆಗೆ 8 ಜನರು ಸಾವನ್ನಪ್ಪಿದ್ದಾರೆ. 15 ದಿನಗಳಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿರುವುದು ಭಾರತದಲ್ಲಿ ಇದೇ ಮೊದಲು. ಕುಟುಂಬದ ಇತರ ಸದಸ್ಯರು ಅನಾರೋಗ್ಯಕ್ಕೊಳಗಾಗಿದ್ದು, ಮನೆಯಲ್ಲಿ ಭಯದ ವಾತಾವರಣ ಮನೆ ಮಾಡಿದೆ. 

88 ವರ್ಷದ ತಾಯಿಯ ನಿಧನದ ಬಳಿಕ ಬೇರೆ ಬೇರೆ ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಜೂನ್ ನಲ್ಲಿ ದೆಹಲಿಯ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

- Advertisement -
spot_img

Latest News

error: Content is protected !!