Saturday, June 6, 2026
Homeತಾಜಾ ಸುದ್ದಿಕಾಂಗ್ರೆಸ್‌ ಪಕ್ಷದ ಮೂರೂ ಅಭ್ಯರ್ಥಿಗಳಿಗೆ ತಲಾ 47 ಮತಗಳು; ಎಂ.ಬಿ. ಪಾಟೀಲ

ಕಾಂಗ್ರೆಸ್‌ ಪಕ್ಷದ ಮೂರೂ ಅಭ್ಯರ್ಥಿಗಳಿಗೆ ತಲಾ 47 ಮತಗಳು; ಎಂ.ಬಿ. ಪಾಟೀಲ

- Advertisement -
- Advertisement -

ಬೆಂಗಳೂರು: ಮತ ಚಲಾಯಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಮೂರೂ ಅಭ್ಯರ್ಥಿಗಳಿಗೆ ತಲಾ 47 ಮತಗಳು ಬೀಳಲಿವೆ ಎಂದು ಹೇಳಿದರು.

‘ನಮ್ಮ ಮೂರೂ ಅಭ್ಯರ್ಥಿಗಳು ನಿರಾಯಾಸವಾಗಿ ಗೆಲ್ಲುತ್ತಾರೆ. ಬೇರೆ ಪಕ್ಷಗಳಿಂದಲೂ ನಮ್ಮ ಅಭ್ಯರ್ಥಿಗಳಿಗೆ ಮತಗಳು ಬರುವ ನಿರೀಕ್ಷೆ ಇದೆ’ ಎಂದರು.

ಇನ್ನು ಅಡ್ಡ ಮತದಾನದ ಸಾಧ್ಯತೆ ಕುರಿತು ಕೇಳಿದಾಗ, ‘ಆ ಬಗ್ಗೆ ಈಗ ನಾನೇನೂ ಹೇಳುವುದಿಲ್ಲ. ಎಲ್ಲವೂ ನಿಮಗೆ ಗೊತ್ತಾಗುತ್ತದೆ’ ಎಂದು ಉತ್ತರಿಸಿದರು.

- Advertisement -

Latest News

error: Content is protected !!