Sunday, June 7, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು 4537 ಮಂದಿಗೆ ಕೋವಿಡ್ ಸೋಂಕು ದೃಢ, 93 ಮಂದಿಯನ್ನು ಬಲಿ ಪಡೆದ ...

ರಾಜ್ಯದಲ್ಲಿಂದು 4537 ಮಂದಿಗೆ ಕೋವಿಡ್ ಸೋಂಕು ದೃಢ, 93 ಮಂದಿಯನ್ನು ಬಲಿ ಪಡೆದ ಹೆಮ್ಮಾರಿ, ಸಿಲಿಕಾನ್ ಸಿಟಿಯಲ್ಲೇ 2025 ಕೇಸುಗಳು ಪತ್ತೆ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರುದ್ರ ತಾಂಡವವಾಡುತ್ತಿದೆ. ಇವತ್ತು ಒಂದೇ ದಿನ ರಾಜ್ಯದಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿತರ ಸಂಖ್ಯೆ ನೋಡಿದ್ರೆ ಬೆಚ್ಚಿ ಬೀಳುವಂತಿದೆ. ಒಂದೇ ದಿನದಲ್ಲಿ 4537 ಕೇಸುಗಳು ರಾಜ್ಯದಲ್ಲಿಂದು ಪತ್ತೆಯಾಗೋದರ ಮೂಲಕ ಆತಂಕಕ್ಕೆ ಕಾರಣವಾಗಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 36,631ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 93 ಮಂದಿಯನ್ನು ಕೊರೊನಾ ತನಗೆ ಬಲಿಯಾಗಿಸಿಕೊಂಡಿದೆ. 1018 ಮಂದಿ ಇವತ್ತು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಇಂದು 2125 ಕೇಸುಗಳು ಪತ್ತೆಯಾಗಿವೆ. ಅಲ್ಲದೇ 49 ಮಂದಿಯನ್ನು ಇಂದು ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಬಲಿ ಪಡೆದುಕೊಂಡಿದೆ. ಸದ್ಯ ಬೆಂಗಳೂರಿನಲ್ಲಿ 22,498 ಸಕ್ರೀ ಪ್ರಕರಣಗಳಿವೆ. ಇವತ್ತು 250 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

- Advertisement -

Latest News

error: Content is protected !!