Saturday, May 4, 2024
Homeತಾಜಾ ಸುದ್ದಿಪಡಿತರದಾರರಿಗೆ ಮುಂದಿನ ತಿಂಗಳಿನಿಂದ 4 ಕೆಜಿ ಅಕ್ಕಿ ಕಡಿತ

ಪಡಿತರದಾರರಿಗೆ ಮುಂದಿನ ತಿಂಗಳಿನಿಂದ 4 ಕೆಜಿ ಅಕ್ಕಿ ಕಡಿತ

spot_img
- Advertisement -
- Advertisement -

ಬೆಂಗಳೂರು: ಮುಂದಿನ ತಿಂಗಳಿನಿಂದ ಪಡಿತರದಾರರಿಗೆ 4 ಕೆಜಿ ಅಕ್ಕಿ ಕಡಿತ ಮಾಡಲಾಗುತ್ತದೆ. ಪಡಿತರದಾರರಿಗೆ 10 ಕೆಜಿ ಬದಲು 6 ಕೆಜಿ ಮಾತ್ರ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.

ಕಳೆದ 2 ವರ್ಷಗಳಿಂದ 10 ಕೆಜಿ ಉಚಿತ ಅಕ್ಕಿ ನೀಡಲಾಗುತ್ತಿತ್ತು. ಮುಂದಿನ ತಿಂಗಳಿಂದ 6 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ರಾಜ್ಯದಲ್ಲಿ ಕೇಂದ್ರದ 1.2 ಕೋಟಿ BPL ಕಾರ್ಡ್​ದಾರರಿದ್ದಾರೆ. ಈಗ ಕೇಂದ್ರವೇ ನೇರವಾಗಿ 5 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ರಾಜ್ಯ ಸರ್ಕಾರ 1 ಕೆಜಿ ಅಕ್ಕಿ ಖರೀದಿಸಿ ಉಚಿತವಾಗಿ ನೀಡಲಿದೆ. ಈ ಹಿಂದೆ ರಾಜ್ಯ ಸರ್ಕಾರ ಕೇಂದ್ರದಿಂದ ಅಕ್ಕಿ ಖರೀದಿಸುತ್ತಿತ್ತು. ಪ್ರತಿ ಕೆಜಿಗೆ 3 ರೂ. ಕೊಟ್ಟು ಖರೀದಿಸಿ ಉಚಿತವಾಗಿ ನೀಡುತ್ತಿತ್ತು ಎಂದರು.

- Advertisement -
spot_img

Latest News

error: Content is protected !!