Thursday, June 4, 2026
Homeಉದ್ಯಮಇನ್ಫೋಸಿಸ್‌ಗೆ ₹32 ಸಾವಿರ ಕೋಟಿ ಜಿಎಸ್‌ಟಿ ನೋಟಿಸ್‌; ತೆರಿಗೆ ವಂಚನೆ ಆರೋಪ

ಇನ್ಫೋಸಿಸ್‌ಗೆ ₹32 ಸಾವಿರ ಕೋಟಿ ಜಿಎಸ್‌ಟಿ ನೋಟಿಸ್‌; ತೆರಿಗೆ ವಂಚನೆ ಆರೋಪ

- Advertisement -
- Advertisement -

ನವದೆಹಲಿ: ಐಟಿ ಸೇವಾ ಕಂಪನಿ ಇನ್ಫೋಸಿಸ್‌ಗೆ ಕೇಂದ್ರ ಸರ್ಕಾರ ಬಹು ದೊಡ್ಡ ಆಘಾತ ನೀಡಿದೆ.  ಬರೋಬ್ಬರಿ 32,403 ಕೋಟಿ ರೂಪಾಯಿ ಮೊತ್ತದ ನೋಟಿಸ್‌ ಅನ್ನು ತೆರಿಗೆ ವಂಚನೆಯ ಮೇರೆಗೆ ಬೆಂಗಳೂರಿನ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯವು (ಡಿಜಿಜಿಐ) ನೀಡಿದೆ.

ಈ ನೋಟಿಸ್ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ವಂಚಿಸಿದ ಆರೋಪದ ಮೇಲೆ ನೀಡಲಾಗಿದ್ದು, ಕರ್ನಾಟಕದ ಜಿಎಸ್‌ಟಿ ಅಧಿಕಾರಿಗಳು ಶೋಕಾಸ್‌ ಪೂರ್ವ (ಪ್ರಿ ಶೋಕಾಸ್‌) ನೋಟಿಸ್‌ ನೀಡಿರುವುದಾಗಿ ಸ್ವತಃ ಕಂಪನಿ ಬಿಎಸ್‌ಇಗೆ ಸಲ್ಲಿಸಿದ ದಾಖಲೆಯಲ್ಲಿ ತಿಳಿಸಿದೆ.

ಇನ್ಫೋಸಿಸ್‌ ಕಂಪನಿಯು ಬೇರೆ ದೇಶಗಳಲ್ಲಿ ಹೊಂದಿರುವ ಬ್ರ್ಯಾಂಚ್‌ ಆಫೀಸ್‌ಗಳಿಂದ 2017-18ರಿಂದ 2021-22ರಲ್ಲಿ ಸರಬರಾಜು ಮಾಡಲಾಗಿರುವ ಸ್ವೀಕೃತಿಗಳ ಬದಲಾಗಿ ಬ್ರ್ಯಾಂಚ್‌ ಆಫೀಸ್‌ಗಳ ವೆಚ್ಚ ಎಂಬುದಾಗಿ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ಹಾಗಾಗಿ, ರಿವರ್ಸ್‌ ಚಾರ್ಜ್‌ ಮೆಕ್ಯಾನಿಸಂ ನಿಯಮಗಳ ಪ್ರಕಾರ ಭಾರತದಿಂದ ಹೊರಗಿರುವ ಬ್ರ್ಯಾಂಚ್‌ಗಳಿಂದ ಸರಬರಾಜು ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಇನ್ಫೋಸಿಸ್‌ ಲಿಮಿಟೆಡ್‌ ಕಂಪನಿಯು 32,403 ಕೋಟಿ ರೂ. ಐಜಿಎಸ್‌ಟಿ ಪಾವತಿಸಬೇಕು” ಎಂಬುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಕಿಡಿಕಾರಿರುವ ಮಾಜಿ ಇನ್ಫೋಸಿಸ್‌ ಅಧಿಕಾರಿ ಟಿವಿ ಮೋಹನ್‌ದಾಸ್ ಪೈ, ‘ಇದು ತೆರಿಗೆ ಭಯೋತ್ಪಾದನೆಯ ಅತ್ಯಂತ ಕೆಟ್ಟ ರೂಪ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!