Friday, May 3, 2024
Homeತಾಜಾ ಸುದ್ದಿಸಿನಿಮಾ ರಂಗಕ್ಕೆ ಮುಂದಿನ ಐದು ವರ್ಷಗಳಲ್ಲಿ 3 ಸಾವಿರ ಕೋಟಿ ಹೂಡಿಕೆ: ಹೊಂಬಾಳೆ ಫಿಲ್ಮ್ಸ್ ಮಹತ್ವದ...

ಸಿನಿಮಾ ರಂಗಕ್ಕೆ ಮುಂದಿನ ಐದು ವರ್ಷಗಳಲ್ಲಿ 3 ಸಾವಿರ ಕೋಟಿ ಹೂಡಿಕೆ: ಹೊಂಬಾಳೆ ಫಿಲ್ಮ್ಸ್ ಮಹತ್ವದ ಘೋಷಣೆ

spot_img
- Advertisement -
- Advertisement -

ಸಿನಿಮಾ ರಂಗಕ್ಕೆ ಮುಂದಿನ ಐದು ವರ್ಷಗಳಲ್ಲಿ 3 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು ಅವರೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಹಲವು ಬಿಗ್ ಬಜೆಟ್ ಚಿತ್ರಗಳು ಈ ನಿರ್ಮಾಣ ಸಂಸ್ಥೆಯಿಂದ ಮೂಡಿ ಬರುವ ಸೂಚನೆ ಸಿಕ್ಕಿದೆ.

ಹೊಂಬಾಳೆ ಫಿಲ್ಮ್ಸ್’ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಈ ನಿರ್ಮಾಣ ಸಂಸ್ಥೆ ನೀಡಿದೆ. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರಗಳಿಂದ ಈ ಸಂಸ್ಥೆಗೆ ದೊಡ್ಡ ಮಟ್ಟದ ಲಾಭ ಆಗಿದೆ. ‘ಕೆಜಿಎಫ್ 2’ ವಿಶ್ವ ಮಟ್ಟದಲ್ಲಿ 1300+ ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇದರಿಂದ ವಿಜಯ್ ಅವರ ಜೇಬು ತುಂಬಿದೆ. ಇತ್ತೀಚೆಗೆ ತೆರೆಗೆ ಬಂದ ‘ಕಾಂತಾರ’ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಈ ಸಿನಿಮಾ ಕೂಡ ದೊಡ್ಡ ಮಟ್ಟದ ಲಾಭ ನೀಡಿದೆ. 15 ಕೋಟಿ ಬಜೆಟ್ನಲ್ಲಿ ರೆಡಿ ಆದ ಈ ಚಿತ್ರದ ಒಟ್ಟಾರೆ ಕಲೆಕ್ಷನ್ 400 ಕೋಟಿ ರೂಪಾಯಿ ದಾಟಿದೆ. ಈ ಎಲ್ಲಾ ಸಿನಿಮಾಗಳಿಂದ ಆದ ಲಾಭವನ್ನು ಚಿತ್ರರಂಗಕ್ಕೆ ಮರಳಿ ಹೂಡಿಕೆ ಮಾಡಲು ವಿಜಯ್ ನಿರ್ಧರಿಸಿದಂತಿದೆ.

- Advertisement -
spot_img

Latest News

error: Content is protected !!