Friday, June 5, 2026
Homeತಾಜಾ ಸುದ್ದಿರಾಜ್ಯದಲ್ಲಿ ಬೆಳಗ್ಗೆ 100, ಸಂಜೆ ವರದಿಯಲ್ಲಿ ಒಬ್ಬರಿಗೆ ಕೊರೋನಾ ದೃಢ

ರಾಜ್ಯದಲ್ಲಿ ಬೆಳಗ್ಗೆ 100, ಸಂಜೆ ವರದಿಯಲ್ಲಿ ಒಬ್ಬರಿಗೆ ಕೊರೋನಾ ದೃಢ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಇಂದು 101 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2283 ಕ್ಕೆ ಏರಿಕೆಯಾಗಿದೆ.

ಇವತ್ತು ಬೆಳಗ್ಗೆ 100 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಂಜೆ ಹೆಲ್ತ್ ಬುಲೆಟಿನ್ ನಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಲ್ಲಿ ಗೊತ್ತಾಗಿದೆ. ಸಂಜೆ ಪತ್ತೆಯಾದ ಒಂದು ಕೇಸ್ ವಿಜಯಪುರ ಜಿಲ್ಲೆಯದ್ದಾಗಿದೆ.

ಇವತ್ತು ವಿಜಯಪುರ 6, ದಾವಣಗೆರೆ 11, ಬೀದರ್ 10, ಉಡುಪಿ 3, ದಕ್ಷಿಣ ಕನ್ನಡ 3, ಕೋಲಾರ 2, ಬೆಂಗಳೂರು ನಗರ 2, ಬಾಗಲಕೋಟೆ 1, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 20, ಯಾದಗಿರಿ 14, ಬೆಳಗಾವಿ 13 ಸೇರಿದಂತೆ 101 ಪ್ರಕರಣ ಪತ್ತೆಯಾಗಿವೆ.

ಇವತ್ತು 43 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 748 ಸೋಂಕಿತರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1489 ಆಗಿದೆ. ಇದುವರೆಗೆ 44 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 18 ಮಂದಿ ಐಸಿಯುನಲ್ಲಿದ್ದಾರೆ. ಇವತ್ತು ಪತ್ತೆಯಾದ ಪ್ರಕರಣಗಳಲ್ಲಿ 81 ಮಂದಿ ಅಂತರರಾಜ್ಯ ಪ್ರಯಾಣಿಕರಾಗಿದ್ದಾರೆ.

https://twitter.com/DHFWKA/status/1265256975299776523

- Advertisement -

Latest News

error: Content is protected !!