Friday, June 5, 2026
Homeಕರಾವಳಿಮಂಗಳೂರುಮಂಗಳೂರು: ಮಸಾಜ್ ಪಾರ್ಲರ್‌ ಮೇಲೆ ದಾಳಿ ಪ್ರಕರಣ; 14 ಮಂದಿಯನ್ನು ಬಂಧಿಸಿದ ಪೊಲೀಸರು

ಮಂಗಳೂರು: ಮಸಾಜ್ ಪಾರ್ಲರ್‌ ಮೇಲೆ ದಾಳಿ ಪ್ರಕರಣ; 14 ಮಂದಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು: ಮಸಾಜ್ ಪಾರ್ಲರ್‌ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ.

ಸ್ಥಳೀಯ ಚಾನೆಲ್ ಕ್ಯಾಮರಾಮ್ಯಾನ್ ಶರಣ್ ರಾಜ್, ರಾಮಸೇನೆ ಸ್ಥಾಪಕ ಪ್ರಸಾದ್ ಅತ್ತಾವರ್, ರಾಮಸೇನೆಯ ಕಾರ್ಯಕರ್ತರಾದ ಫರಂಗಿಪೇಟೆಯ ಹರ್ಷರಾಜ್, ವಾಮಂಜೂರಿನ ಮೋಹನ್‌ದಾಸ್, ಕಾಸರಗೋಡಿನ ಪುರಂದರ, ವಾಮಂಜೂರಿನ ಸಚಿನ್, ರವೀಶ್, ಅಂಕಿತ್, ಬೆಂಜನಪದವಿನ ಸುಕೇತ್, ಮೂಡುಶೆಡ್ಡೆಯ ಕಾಳಿಮುತ್ತು, ಬೊಂಡಂತಿಲದ ಅಭಿಲಾಷ್, ವಾಮಂಜೂರಿನ ದೀಪಕ್, ನೀರುಮಾರ್ಗದ ವಿಘ್ನೇಶ್, ವಾಮಂಜೂರಿನ ಪ್ರದೀಪ್ ಪೂಜಾರಿ ಬಂಧಿತರು.

ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ “ಕಲರ್ಸ್” ಯೂನಿಸೆಕ್ಸ್ ಸಲೂನ್‌ಗೆ  11ಮಂದಿಯ ತಂಡ ನುಗ್ಗಿ ದಾಂದಲೆ ನಡೆಸಿತ್ತು. ಸೆಲೂನ್ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ವ್ಯಕ್ತಿಗಳು ಆರೋಪಿಸಿ ಮಹಿಳಾ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದ್ದರು. ಅಷ್ಟು ಮಾತ್ರವಲ್ಲದೆ ಸೆಲೂನ್ ಉಪಕರಣಗಳನ್ನು ಧ್ವಂಸಗೊಳಿಸಿ, ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದರು.

ಈ ಕುರಿತು ಸೆಲೂನ್ ಮಾಲೀಕ ನೀಡಿದ ದೂರಿನ ಆಧಾರದ ಮೇಲೆ, ಬರ್ಕೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.ಈ ಪ್ರಕರಣವನ್ನು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!