Thursday, October 15, 2026
Homeಕರಾವಳಿ ಬೆಳ್ತಂಗಡಿ: ನಡ, ಮಡಂತ್ಯಾರು ಮತ್ತು ಕಲ್ಲೇರಿಯಲ್ಲಿ ಹರೀಶ್‌ ಪೂಂಜ ಬಹಿರಂಗ ಪ್ರಚಾರ ಸಭೆ

 ಬೆಳ್ತಂಗಡಿ: ನಡ, ಮಡಂತ್ಯಾರು ಮತ್ತು ಕಲ್ಲೇರಿಯಲ್ಲಿ ಹರೀಶ್‌ ಪೂಂಜ ಬಹಿರಂಗ ಪ್ರಚಾರ ಸಭೆ

- Advertisement -
- Advertisement -

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್‌ ಪೂಂಜ ಅವರು ನಡ, ಮಡಂತ್ಯಾರು ಮತ್ತು ಕಲ್ಲೇರಿಯಲ್ಲಿ ನಡೆದ ಬೃಹತ್ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗಿಯಾದರು.

ಬೆಳ್ತಂಗಡಿ ಕ್ಷೇತ್ರದ ಬಂಧುಗಳು ಮೊದಲ ಬಾರಿಗೆ ಗೆಲ್ಲಿಸಿದಾಗ ರಸ್ತೆ, ಕಿಂಡಿ ಅಣೆಕಟ್ಟು, ಶಾಲಾ-ಕಾಲೇಜು ಅಭಿವೃದ್ಧಿ, ಗ್ರಂಥಾಲಯ ನಿರ್ಮಾಣ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯೂ ಗೆಲ್ಲಿಸಿದರೆ ತಾಲೂಕನ್ನು ದೇಶಕ್ಕೆ ಮಾದರಿಯಾಗಿ ಅಭಿವೃದ್ಧಿಪಡಿಸುತ್ತೇನೆ ಈ ವೇಳೆ ಹರೀಶ್ ಪೂಂಜ ತಿಳಿಸಿದ್ರು.

ಬಹಿರಂಗ ಪ್ರಚಾರ ಸಭೆಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಕಿಯೋನಿಕ್ಸ್‌ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ,  ಹಿರಿಯರಾದ ಸುಬ್ರಮಣ್ಯ ಅಗರ್ತ, ಚಲನಚಿತ್ರ ನಟರಾದ ಹಿತೇಶ್ ಪೂಜಾರಿ ಕಾಪಿನಡ್ಕ ಹಾಗೂ ಅನೀಶ್ ಪೂಜಾರಿ ವೇಣೂರು, ಅಭ್ಯರ್ಥಿ ಪ್ರಮುಖ್‌ ಜಯಾನಂದ್‌ ಗೌಡ, ಮಂಡಲ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Latest News

error: Content is protected !!