- Advertisement -
![]()
- Advertisement -
ಕಾರ್ಕಳ; ಪ್ರಕರಣವೊಂದರಲ್ಲಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇಬ್ರಾಹಿಂ ಯಾನೆ @ ಇಬ್ಬು ಬಂಧಿತ ಆರೋಪಿ.
ಇಬ್ರಾಹಿಂ ಯಾನೆ @ ಇಬ್ಬು ಹಲವು ವರ್ಷಗಳಿಂದ ತಲೆಮರಿಸಿಕೊಂಡಿದ್ದ.ಕಾರ್ಕಳ ನಗರ ಠಾಣೆಯ ವಾರಂಟ್ ಸಿಬ್ಬಂದಿ ಎಚ್‌ಸಿ 2096 ಲೋಕೇಶ್ ಹಾಗೂ ಎಚ್‌ಸಿ 83 ಸಂಜಯ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಬಂಧಿಸಿ ಕಾರ್ಕಳಕ್ಕೆ ಕರೆತಂದಿದ್ದಾರೆ. ಬಂಧಿತನನ್ನು ಕಾರ್ಕಳದ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -


