Saturday, April 20, 2024
Homeಕರಾವಳಿರೇಡಿಯೋಲೊಜಿ ವಿಭಾಗದಲ್ಲಿ ಹೊಸ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಜ್ಜಾದ ಯೆನೆಪೋಯ ಸ್ಪೆಶಾಲಿಟಿ ಆಸ್ಪತ್ರೆ

ರೇಡಿಯೋಲೊಜಿ ವಿಭಾಗದಲ್ಲಿ ಹೊಸ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಜ್ಜಾದ ಯೆನೆಪೋಯ ಸ್ಪೆಶಾಲಿಟಿ ಆಸ್ಪತ್ರೆ

spot_img
- Advertisement -
- Advertisement -

ಮಂಗಳೂರು: ಕೊಡಿಯಾಲ್‍ಬೈಲ್‍ನ ಯೆನೆಪೋಯ ಸ್ಪೆಶಾಲಿಟಿ ಆಸ್ಪತ್ರೆ ದಿನದ 24 ಗಂಟೆಯೂ ರೇಡಿಯೋಲೊಜಿ ಸೇವೆಗಳನ್ನು ನುರಿತ ವೈದ್ಯರ ಉಪಸ್ಥಿತಿಯೊಂದಿಗೆ ನೀಡಲು ಸಜ್ಜಾಗಿದೆ. ಈ ಸೇವೆಯೊಂದಿಗೆ ಹಗಲು ಅಥವಾ ರಾತ್ರಿಯ ಯಾವುದೇ ಸಮಯದಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳ ತ್ವರಿತ ಮತ್ತು ನಿಖರವಾದ ರೋಗನಿರ್ಣಯವನ್ನು (diagnosis) ಪಡೆಯಬಹುದು.

ಈ ಪ್ರಯುಕ್ತ ಆಸ್ಪತ್ರೆಯು ತನ್ನ ರೇಡಿಯೋಲೊಜಿ ವಿಭಾಗಕ್ಕೆ ಹೊಸ ತಂತ್ರಜ್ಞಾನವನ್ನು ತರುವ ಮೂಲಕ ನವೀಕೃತಗೊಂಡ ಉಪಕರಣಗಳನ್ನು ಅಳವಡಿಸಲಾಗಿದೆ. ಹಾಗು ಹಿರಿಯ ರೇಡಿಯೋಲೊಜಿ ತಜ್ಞರಾದ ಡಾ. ದೇವದಾಸ್ ಆಚಾರ್ಯ, ಡಾ. ರವಿಚಂದ್ರ ಜಿ. ಮತ್ತು ಡಾ. ವಿನಾಯಕ ಯು.ಎಸ್., ಅವರ ​​ನೇತೃತ್ವದ ತಂಡದೊಂದಿಗೆ ಕೈಜೋಡಿಸಿದೆ.

2021 ರ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಹೊಸ ಸೌಲಭ್ಯವನ್ನು ಪ್ರಾರಂಭಿಸಿದ ಯೆನೆಪೋಯ ಆಸ್ಪತ್ರೆ ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತುರ್ತು ಆರೈಕೆಯಲ್ಲಿನ ವಿಳಂಬವನ್ನು ತಪ್ಪಿಸುವ ಅಗತ್ಯದಿಂದ ಈ ಸೇವೆ ಪ್ರೇರಿತವಾಗಿದೆ ಎಂದು ತಿಳಿಸಿದೆ. ಸೂಕ್ತ ಚಿಕಿತ್ಸಾವಿಧಾನವನ್ನು ನಿರ್ಣಯಿಸಲು ಸರಿಯಾದ ರೋಗನಿರ್ಣಯವು ಅವಶ್ಯಕವಾಗಿದೆ. ವೈದ್ಯಕೀಯ ತುರ್ತುಸ್ಥಿತಿಗಳು ಯಾವುದೇ ಸಮಯದಲ್ಲಿ ಉದ್ಭವಿಸಬಹುದು ಮತ್ತು ಚಿಕಿತ್ಸೆಯು ವಿಳಂಬವಿಲ್ಲದೆ ಪ್ರಾರಂಭವಾಗಬೇಕು. ವೈದ್ಯರ ಲಭ್ಯತೆಯೊಂದಿಗೆ ದೊರಕಲಿರುವ ಹಗಲು-ರಾತ್ರೆ ರೇಡಿಯೋಲೊಜಿ ಸೇವೆಯು ನಗರದ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಿದೆ. ಮಂಗಳೂರಿನ ಹೃದಯಭಾಗದಲ್ಲಿ ನೆಲೆಗೊಂಡಿರುವ ಈ ಹೊಸ ಸೌಲಭ್ಯವು ರೋಗಿಗಳ ತುರ್ತು ಆರೈಕೆಗಾಗಿ ದೊಡ್ಡ ವರದಾನವಾಗಲಿದೆ. ಇದು ಜೀವ ಉಳಿಸಬಲ್ಲ ಸೇವೆಯಾಗಿದೆ ಮತ್ತು ರೋಗಿಗಳಿಗೆ ತ್ವರಿತ ಪರಿಹಾರ ನೀಡಲಿದೆ,” ಎಂದು ಪತ್ರಿಕಾ ಪ್ರಕಟಣೆÉಯಲ್ಲಿ ಯೆನೆಪೋಯ ಆಸ್ಪತ್ರೆ ತಿಳಿಸಿದೆ.

ಯೆನೆಪೋಯ ಆಸ್ಪತ್ರೆ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿರುವ ಅತ್ಯುತ್ತಮ ರೇಡಿಯೋಲೊಜಿ ಮೂಲಸೌಕರ್ಯವನ್ನು ನೀಡುತ್ತಿದೆ. ಹೊಸ ರೇಡಿಯೋಲೊಜಿ ಸಲಕರಣೆಗಳ ನವೀಕರಣಗಳು ಹೀಗಿವೆ:
• ಕ್ಯಾನನ್ ಅಕ್ವಿಲಿಯನ್ ಸ್ಟಾರ್ಟ್ ಸೀಟಿ ಸಿಸ್ಟಮ್ – ಕಾರ್ಡಿಯಾಕ್ ಸ್ಕ್ಯಾನ್ ಹೊರತುಪಡಿಸಿ ಎಲ್ಲಾ ರೀತಿಯ ಸ್ಕ್ಯಾನ್/ ಇಂಟರ್ವೆನ್ಷಯನಲ್ ರೇಡಿಯೋಲೊಜಿ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
• ಫಿಲಿಪ್ಸ್ ಇಂಜೇನಿಯಾ 1.5 ಟಿ ಎಂ.ಆರ್.ಐ ಸಿಸ್ಟಮ್ – ಆಡಿಯೊ ಮತ್ತು ವಿಡಿಯೋ ಸೌಲಭ್ಯಗಳೊಂದಿಗೆ ನಿರ್ಮಿಸಲಾದ ಈ ಉಪಕರಣ ಮಾರುಕಟ್ಟೆಯಲ್ಲಿ ಲಭ್ಯವಾಗುವ ಅತ್ಯಧಿಕ ಬೋರ್ ಹೊಂದಿದೆ.
• ಸ್ಯಾಮ್‍ಸಂಗ್ ಎಚ್‍ಎಸ್ 70 ಎ ಅಲ್ಟ್ರಾ ಸೌಂಡ್ ಸಿಸ್ಟಮ್ – 4D ಸ್ಕ್ಯಾನ್ ನೊಂದಿಗೆ, ತೀವ್ರ ಪಿತ್ತಜನಕಾಂಗದ ಕಾಯಿಲೆ ಮತ್ತು ಭ್ರೂಣದ ಚಿತ್ರಣವನ್ನು ಪತ್ತೆಹಚ್ಚಲು ಫೈಬ್ರೊಸ್ಕ್ಯಾನ್ ಸೌಲಭ್ಯ ಹೊಂದಿದೆ.
• ಡಿಜಿಕ್ಸ್ ಎಕೋ ಡಿಜಿಟಲ್ ಎಕ್ಸ್‍ರೆ ಸಿಸ್ಟಮ್ – ವ್ಯಾಪಕ ಶ್ರೇಣ ಹೊಂದಿರುವ ಅತ್ಯಾಧುನಿಕ ಡಿಜಿಟಲ್ ಎಕ್ಸ್‍ರೆ ಉಪಕರಣ.
• ಮೆಟಲ್‍ಟ್ರೋನಿಕಾ ಫ್ಲಾಟ್ ಎಸ್‍ಇ ಮ್ಯಾಮೊಗ್ರಾಫರ್ – ಸಸ್ತನಿ ಗ್ರಂಥಿಗಳ ಸ್ಪಷ್ಟ ಚಿತ್ರಗಳನ್ನು ತೆಗೆಯಬಲ್ಲ ಹೆಚ್ಚು ಪರಿಣಾಮಕಾರಿ ಉಪಕರಣ.
ಆಸ್ಪತ್ರೆಯ ರೇಡಿಯೋಲೊಜಿ ವಿಭಾಗವು ಸಾಕಷ್ಟು ತಾಂತ್ರಿಕ ಮತ್ತು ಶೂಶ್ರುಷಾ ಸಿಬ್ಬಂದಿ, ನಿರಂತರ ವಿದ್ಯುತ್ ಸರಬರಾಜು ಮತ್ತು ಇತರ ಬ್ಯಾಕ್‍ಅಪ್‍ಗಳೊಂದಿಗೆ ಸುಸಜ್ಜಿತವಾಗಿದೆ.

ಇದರ ಜೊತೆಗೆ ಆಸ್ಪತ್ರೆಯು ತನ್ನ ಯುರೊಲೊಜಿ ಸೇವೆಗಳಿಗೆ ಡಾರ್ನಿಯರ್ ಕಾಂಪ್ಯಾಕ್ಟ್ ಡೆಲ್ಟಾ ಲಿಥೊಟ್ರಿಪ್ಟರ್ ಅನ್ನು ಸೇರಿಸುತ್ತಿದೆ. ರೋಗಿಗಳಲ್ಲಿ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುವಲ್ಲಿ ಮತ್ತು ಚೇತರಿಕೆಯ ಸಮಯವನ್ನು ಸುಧಾರಿಸುವಲ್ಲಿ ಮೂತ್ರಶಾಸ್ತ್ರಜ್ಞರನ್ನು ಶಕ್ತಗೊಳಿಸುವ ಈ ಉಪಕರಣವು ಶಕ್ತಿಯುತ ಚಿತ್ರಣ, ಗರಿಷ್ಠ ಶಕ್ತಿ ನೀಡುತ್ತದೆ.

1995 ರಲ್ಲಿ ಸ್ಥಾಪನೆಯಾದ ಯೆನೆಪೋಯ ಆಸ್ಪತ್ರೆ 234 ಹಾಸಿಗೆಗಳ ಉನ್ನತ ಮಟ್ಟದ ಚಿಕಿತ್ಸಾ ಕೇಂದ್ರವಾಗಿದ್ದು, ಹೃದ್ರೋಗ ಮತ್ತು ಹೃದಯ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಮೂತ್ರಶಾಸ್ತ್ರ ಮತ್ತು ನೆಫ್ರಾಲಜಿ, ನರವಿಜ್ಞಾನ ಮತ್ತು ನರಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ವೈದ್ಯಕೀಯ ಮತ್ತು ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ, ಮೂಳೆಚಿಕಿತ್ಸೆ, ನವಜಾತ ಶಿಶು ಚಿಕಿತ್ಸೆ, ಮಕ್ಕಳ ಚಿಕಿತ್ಸೆ ವಿಭಾಗ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ, ಬೆನ್ನುಮೂಳೆಯ ಕ್ಲಿನಿಕ್ ಮತ್ತು ಡಯಾಲಿಸಿಸ್ ಘಟಕ ಇತ್ಯಾದಿಗಳನ್ನು ಹೊಂದಿದೆ.

ರೋಗಿಗಳ ಅನುಕೂಲಕ್ಕಾಗಿ, ಆಸ್ಪತ್ರೆಯು ಪ್ರಮುಖ ಆರೋಗ್ಯ ವಿಮಾ ಕಂಪನಿಗಳು, ಕಾರ್ಪೊರೇಟ್, ಸಾಂಸ್ಥಿಕ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಸಹಯೋಗದೊಂದಿಗೆ ನಗದುರಹಿತ ಚಿಕಿತ್ಸೆಯನ್ನು ನೀಡುತ್ತದೆ. ಯೆನೆಪೋಯ ಆಸ್ಪತ್ರೆಯು ಭಾರತದ ಪ್ರಮುಖ ಆರೋಗ್ಯ ರಕ್ಷಣಾ ಮಾನ್ಯತಾ ಸಂಸ್ಥೆಯಾದ ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ (ಎನ್‍ಎಬಿಹೆಚ್) ಸಂಪೂರ್ಣ ಮಾನ್ಯತೆ ಪಡೆದಿದೆ.

- Advertisement -
spot_img

Latest News

error: Content is protected !!