- Advertisement -
- Advertisement -
ಬೆಂಗಳೂರು: ಕೊಡಗಿನ ಬಿಜೆಪಿ ಕಾರ್ಯಕರ್ತರೊಬ್ಬರು ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ. ವಿನಯ್ ಸೋಮಯ್ಯ (39) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದಕ್ಕೆ ಮನನೊಂದು ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನಾಗವಾರದ ಕಚೇರಿಯಲ್ಲಿ ವಿನಯ್ ಸೋಮಯ್ಯ ನೇಣಿಗೆ ಶರಣಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಡೆತ್‌ನೋಟ್ ಪೋಸ್ಟ್ ಮಾಡಿದ್ದು, ರಾಜಕೀಯ ಪ್ರೇರಿತ ಎಫ್‌ಐಆರ್‌ನಿಂದ ಮನನೊಂದು ಸಾವಿಗೀಡಾಗುತ್ತಿರುವುದಾಗಿ ಬರೆದಿದ್ದಾರೆ ಎನ್ನಲಾಗಿಗೆ.ಗೋಣಿಮರೂರು ಮೂಲದ ವಿನಯ್ ಸೋಮಯ್ಯ ಕೊಡಗಿನ ಸಮಸ್ಯೆಗಳು ಎಂಬ ವಾಟ್ಸಾಪ್ ಗ್ರೂಪ್ ಅಡ್ಮಿನ್ ಆಗಿದ್ದರು.
- Advertisement -