Monday, June 30, 2025
Homeಕರಾವಳಿಮೂಡುಕೋಡಿ: ಆನ್ ಲೈನ್ ಪಾಠ ಕೇಳಲು ಮಕ್ಕಳ ಪರದಾಟ ; ಗುಡ್ಡ ಹತ್ತಿ ಬಂಡೆಯ ಮೇಲೆ...

ಮೂಡುಕೋಡಿ: ಆನ್ ಲೈನ್ ಪಾಠ ಕೇಳಲು ಮಕ್ಕಳ ಪರದಾಟ ; ಗುಡ್ಡ ಹತ್ತಿ ಬಂಡೆಯ ಮೇಲೆ ಪಾಠ ಕೇಳಬೇಕಾದ ಅನಿವಾರ್ಯತೆಯಲ್ಲಿ ಮಕ್ಕಳು!

spot_img
- Advertisement -
- Advertisement -

ಮೂಡುಕೋಡಿ: ಇಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆಯು ಒಂದಾಗಿದ್ದು, ಇಲ್ಲಿನ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಊಹಿಸಲು ಅಸಾಧ್ಯವಾಗಿದೆ. ಮಕ್ಕಳ ಶಿಕ್ಷಣಕ್ಕೆ ಅಡೆ-ತಡೆಗಳಾಗಬಾರದೆಂದು ಸರ್ಕಾರವು ಆನ್ಲೈನ್ ತರಗತಿಗಳನ್ನು ಆರಂಭಿಸಿದ್ದರೂ ಮಕ್ಕಳಿಗೆ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದ ಹೊರಬರಲು ಅಸಾಧ್ಯವಾಗಿದೆ.

ಇಂತಹ ಸಮಸ್ಯೆ ಕಂಡು ಬಂದಿದ್ದು ಬೆಳ್ತಂಗಡಿ ತಾಲೂಕಿನ ವೇಣೂರು ಹೋಬಳಿಯ ಮೂಡುಕೋಡಿ ಗ್ರಾಮದಲ್ಲಿ.

ಗ್ರಾಮೀಣ ಪ್ರದೇಶಗಳಂತಹ ಊರುಗಳಲ್ಲಿ‌ ಮೊಬೈಲ್ ನೆಟ್ ವರ್ಕ್ ಇಲ್ಲದ ಕಾರಣ ಮಕ್ಕಳು, ಕಾಡು ಗಿಡ ಮರಗಳನ್ನದೆ ಕಲ್ಲು-ಮುಳ್ಳು ಬಂಡೆಗಳ ಮೇಲೆ ಎದ್ದು ಬಿದ್ದು ತರಗತಿಗಳಿಗೆ ಹಾಜರಾಗಿ ಪಾಠವನ್ನು ಕೇಳಬೇಕಾದ ಪರಿಸ್ಥಿತಿ ಇಂದಿನದ್ದಾಗಿದೆ.

ಸರಿಯಾಗಿ ಧ್ವನಿ ಕೇಳಿಸದೆ ದೂರವಾಣಿ ಮೂಲಕ ಮಾತನಾಡಲು ಆಗದ ಮೂಡುಕೋಡಿಯ ಮಕ್ಕಳಿಗೆ ಗೂಗಲ್ ಮೀಟ್ ಮೂಲಕ ತರಗತಿಗೆ ಹಾಜರಾಗಲು ಎಷ್ಟರ ಮಟ್ಟಿಗೆ ಸಾಧ್ಯವಾದೀತು? ಒಂದು ಲಿಂಕ್ ತೆರೆಯಲು ನೆಟ್ ವರ್ಕ್ ಸಮಸ್ಯೆಯಾದಾಗ ಅಥವಾ ಬೋಧನೆಯ ಮಧ್ಯೆ ಹಲವು ಬಾರಿ ಸಂಪರ್ಕ ಸಮಸ್ಯೆಯಾದಾಗ ಅನೇಕ ಶಬ್ದಗಳ ಗೊಂದಲದೊಂದಿಗೆ ಮಕ್ಕಳು ಪಾಠ ಕೇಳಿಸದೆ ಎಷ್ಟರ ಮಟ್ಟಿಗೆ ಮಕ್ಕಳಿಗೆ ಪಾಠವನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಬಹುದು ಎಂಬುವುದು ಪೋಷಕರ ಅಳಲು.

ಕೊರೋನಾ ಸಂದರ್ಭದಲ್ಲಿ ಲಾಕ್ಡೌನ್ ಹೇರಿದ್ದರಿಂದ ಅನೇಕ ಜನರು ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದರೂ ಮಕ್ಕಳ ಭವಿಷ್ಯಕ್ಕೋಸ್ಕರ ಮೊಬೈಲ್ ಫೋನ್ ಹಾಗೂ ಕರೆನ್ಸಿಗಾಗಿ ಹಣ ದುಂದುವೆಚ್ಚ ಮಾಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೆಟ್ ವರ್ಕಿಗಾಗಿ ಮಕ್ಕಳು ಗುಡ್ಡ, ಮರ ಹತ್ತಿ ಪಾಠ ಕೇಳಬೇಕಾದ ಅನಿವಾರ್ಯ ಬಂದೊದಗಿದೆ. ಈ ಸಂದರ್ಭದಲ್ಲಿ ಮಕ್ಕಳು ಜಾರಿ ಬಿದ್ದು ಕೈ ಕಾಲು ಮುರಿದುಕೊಂಡರೆ ಅಥವಾ ಜೀವಕ್ಕೆ ಏನಾದರು ಅನಾಹುತ ಆದರೆ ಯಾರು ಹೊಣೆ ಎಂಬ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದು ಸಂಬಂಧಪಟ್ಟ ತಾಲೂಕಿನ ಅಧಿಕಾರಿಗಳು, ಬೆಳ್ತಂಗಡಿ ಶಾಸಕರು, ಶಿಕ್ಷಣ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶವಾದ ಮೂಡುಕೋಡಿಯ ಮೊಬೈಲ್ ನೆಟ್ವರ್ಕ್ ಸಮಸ್ಯೆಗಳನ್ನು ಪರಿಹರಿಸಿಕೊಡವರೇ ಎಂದು ಕಾದುನೋಡಬೇಕಾಗಿದೆ.

- Advertisement -
spot_img

Latest News

error: Content is protected !!