Wednesday, May 15, 2024
Homeಕರಾವಳಿಉಡುಪಿಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಿನಲ್ಲಿ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಅಮಾಯಕನಿಗೆ ನಿದ್ರೆ ಮಾತ್ರೆ...

ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಿನಲ್ಲಿ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಅಮಾಯಕನಿಗೆ ನಿದ್ರೆ ಮಾತ್ರೆ ಕೊಟ್ಟು ಕೊಲೆಗೈದ ಆರೋಪಿಗಳು

spot_img
- Advertisement -
- Advertisement -

ಬೈಂದೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಪ್ರಕರಣ ಈಗ ತಿರುವು ಪಡೆದಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆನಂದ ದೇವಾಡಿಗ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ.

ಕಾರ್ಕಳ ಮೂಲದ ಸರ್ವೆಯರ್ ಸದಾನಂದ ಶೇರೇಗಾರ್ ಎಂಬಾತ ಕೊಲೆಗೈದ ಆರೋಪಿಯಾಗಿದ್ದು, ಕಾರ್ಕಳ ತಾಲೂಕಿನಲ್ಲಿ ಸರ್ವೆಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಫೋರ್ಜರಿ ಆರೋಪದಲ್ಲಿ ಸದಾನಂದ ಮೇಲೆ ಕೇಸು ದಾಖಲಾಗಿ ಸಮನ್ಸ್ ನೀಡಲಾಗಿತ್ತು. ಹೀಗಾಗಿ ತನ್ನ ಮೇಲೆ ಆರೋಪ ಬಂದಾಗ ಆರೋಪಿ ಕೊಲೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ತಾನು ಸತ್ತಿರುವುದಾಗಿ ಬಿಂಬಿಸಲು ಆರೋಪಿ ಸದಾನಂದ ಅಮಾಯಕನನ್ನು ಕೊಲೆಗೈದಿದ್ದು,
ತನ್ನ ಪರಿಚಯದ ವ್ಯಕ್ತಿಗೆ ನಿದ್ರೆ ಮಾತ್ರೆ ಕೊಟ್ಟು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ನಿದ್ರೆ ಮಾತ್ರೆ ಸೇವಿಸಿದ್ದ ವ್ಯಕ್ತಿಯನ್ನು ತನ್ನದೇ ಸ್ವಂತ ಕಾರಿನೊಳಗೆ ಇರಿಸಿ ಸುಟ್ಟು ಹಾಕಿ ತಾನೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಲು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದಾನಂದನ ಕೃತ್ಯಕ್ಕೆ ಗೆಳೆಯರ ಸಾಥ್ ನೀಡಲ್ಪಟ್ಟಿದ್ದು ಶಿಲ್ಪ ಸಾಲಿಯಾನ್, ಸತೀಶ ದೇವಾಡಿಗ, ನಿತಿನ್ ದೇವಾಡಿಗ ಕೊಲೆಗೆ ಸಹಕರಿಸಿದ ಉಳಿದ ಆರೋಪಿಗಳಾಗಿದ್ದಾರೆ‌.

ಸದ್ಯ ಎಲ್ಲಾ ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ.

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೇನ್ ಬೇರ್ ಎಂಬಲ್ಲಿ ಬುಧವಾರ ಬೆಳಗ್ಗೆ ಕಾರಿನಲ್ಲಿ ಶವ ಪತ್ತೆಯಾಗಿತ್ತು.

- Advertisement -
spot_img

Latest News

error: Content is protected !!