Saturday, May 11, 2024
Homeಕರಾವಳಿಉಳ್ಳಾಲ: ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದ ವಿದ್ಯಾರ್ಥಿನಿಯ ಮೊಬೈಲ್‌ ಎಗರಿಸಿ ಕಳ್ಳರು ಪರಾರಿ, ದೂರು ದಾಖಲು

ಉಳ್ಳಾಲ: ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದ ವಿದ್ಯಾರ್ಥಿನಿಯ ಮೊಬೈಲ್‌ ಎಗರಿಸಿ ಕಳ್ಳರು ಪರಾರಿ, ದೂರು ದಾಖಲು

spot_img
- Advertisement -
- Advertisement -

ಉಳ್ಳಾಲ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ನರ್ಸಿಂಗ್‌ ವಿದ್ಯಾರ್ಥಿನಿಯ ಕೈಯಲ್ಲಿದ್ದ ಮೊಬೈಲ್‌ನ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು ಎಗರಿಸಿ ಪರಾರಿಯಾದ ಘಟನೆ ತೊಕ್ಕೊಟ್ಟು-ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ.

ಕುನ್ಸಾಂಗ್ ಲಚಿಕ್ ಅನ್ನುವ ನರ್ಸಿಂಗ್ ವಿದ್ಯಾರ್ಥಿನಿ ಕೈಯಲ್ಲಿದ್ದ ಮೊಬೈಲನ್ನು ಕಳುವಾಗಿದೆ. ಮೂವರು ವಿದ್ಯಾರ್ಥಿನಿಯರು ಶಾಪಿಂಗ್‌ ಮುಗಿಸಿ ಹಾಸ್ಟೆಲ್ ಕಡೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!