Sunday, June 2, 2024
Homeಕರಾವಳಿಅನ್ಯಕೋಮಿನ ಯುವತಿಯರನ್ನು ಕರೆದೊಯ್ದ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ!- ಪೊಲೀಸ್ ಕೇಸು ದಾಖಲು

ಅನ್ಯಕೋಮಿನ ಯುವತಿಯರನ್ನು ಕರೆದೊಯ್ದ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ!- ಪೊಲೀಸ್ ಕೇಸು ದಾಖಲು

spot_img
- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಕೊಟ್ಟಿಗೆ ಹಾರದ ಟ್ಯಾಕ್ಸಿ ಚಾಲಕ ಮಹಮ್ಮದ್‌ ದಿಸಾನ್ ಎಂಬವರು ಚಾರ್ಮಾಡಿ ಗ್ರಾಮದ ಹಳ್ಳ ಸೇತುವೆ ಎಂಬಲ್ಲಿ ತನ್ನ ವಾಹನದಲ್ಲಿ ಉಜಿರೆಯಿಂದ – ಕೊಟ್ಟಿಗೆಹಾರಕ್ಕೆ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದ ಸಮಯ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಹಳ್ಳ ಸೇತುವೆ ಎಂಬಲ್ಲಿಗೆ ತಲುಪುತ್ತಿದಂತೆ ಕಾರು ಮತ್ತು ಬೈಕ್‌ ನಲ್ಲಿ ಬಂದ ದುಷ್ಕರ್ಮಿಗಳು ಕೈಯಲ್ಲಿ ಮಾರಕ ಆಯುಧಗಳನ್ನು ಹಿಡಿದು ವಾಹನಕ್ಕೆ ಅಡ್ಡಗಟ್ಟಿದ್ದಾರೆ.

ವಾಹನ ಮುಂದೆ ಹೋಗದಂತೆ ಅವಾಚ್ಯ ಪದಗಳಿಂದ ನಿಂದಿಸಿ,”ನೀನು ಹಿಂದೂ ಹುಡಗಿಯರನ್ನು ನಿನ್ನ ವಾಹನದಲ್ಲಿ ಕರೆದುಕೊಂಡು ಹೋಗುತ್ತೀಯಾ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಜೀವಬೆದರಿಕೆ ಹಾಕಿದ್ದಾರೆ. ರಾಡ್,‌ ಹೆಲ್ಮೇಟ್‌, ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಮಹಮ್ಮದ್‌ ದಿಸಾನ್ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿತರಾದ ಸುದೀರ್‌,ದಿನೇಶ, ಪವನ್‌ ರಾವ್‌, ಕಿರಣ್‌ ಸಾಲಿಯಾನ್‌, ಅಖಿಲೇಶ ರಾವ್‌, ಜಗದೀಶ,ಲೋಕೇಶ ಶೆಟ್ಟಿ,ಪ್ರಮೋದ್‌ ಕುಮಾರ್‌ ಹೆಸರಿನಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -
spot_img

Latest News

error: Content is protected !!