ಬೆಳ್ತಂಗಡಿ: ಮೊಗ್ರು ಗ್ರಾಮದ ಅಲೆಕ್ಕಿ-ಮುಗೇರಡ್ಕ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಹಾಗೂ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಇದರ ಸಹಯೋಗದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ 5 ರಿಂದ 14 ವರ್ಷಗಳ ಮಕ್ಕಳಿಗೆ ಬೇಸಿಗೆ ಶಿಬಿರ ಚಿಣ್ಣರ ಚಿಲಿಪಿಲಿ 2025 ಕಾರ್ಯಕ್ರಮ ಎಪ್ರಿಲ್ 13 ರಿಂದ 17 ರವರೆಗೆ ನಡೆಯಲಿದೆ.

ಪದ್ಮುಂಜ ಪ್ರಾಥಮಿಕ ಕೃಷ್ಣಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಅಶೋಕ ಗೌಡ ಪಾಂಜಾಲ, ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಅಲೆಕ್ಕ -ಮುಗೇರಡ್ಕ ಇದರ ಗೌರವಧ್ಯಕ್ಷರಾದ ಉದಯ ಭಟ್ ಕೊಳಬ್ಬೆ, ಪದ್ಮುಂಜಾ ಸಿ. ಎ. ಬ್ಯಾಂಕ್ ನಿರ್ದೇಶಕರಾದ ಶ್ರೀಮತಿ ಶೀಲಾವತಿ ಬಾಬು ಗೌಡ ಮುಗೇರಡ್ಕ, ಪ್ರಭಾಕರ ಗೌಡ ಗುತ್ಯೋಡಿ, ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ- ಮುಗೇರಡ್ಕ ಇದರ ಅಧ್ಯಕ್ಷರಾದ ರಮೇಶ್. ಏನ್, ಶ್ರೀರಾಮ ಶಿಶು ಮಂದಿರ ಅಲೆಕ್ಕಿ-ಮುಗೇರಡ್ಕ ಇದರ ಸಂಚಾಲಕರಾದ ಅಶೋಕ್ ಗೌಡ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿವೇಕಾನಂದ ಇಂಗ್ಲಿಷ್ ಮೀಡಿಯo ಶಾಲೆಯ ಶಿಕ್ಷಕರಾದ ರಮೇಶ್, ಕ್ರೀಡಾ ತರಬೇತುದಾರರಾದ ನವೀನ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯ ಶಿಕ್ಷಕರಾದ ಶ್ರೀಮತಿ ಮಾಲಿನಿ, ಇಂದ್ರಪ್ರಥ್ಸ ಆoಗ್ಲ ಮಾಧ್ಯಮ ಶಾಲೆಯ ಯೋಗ ಏರೋಬಿಕ್ಸ್, ತರಬೇತುದಾರರು, ದೈಹಿಕ ಶಿಕ್ಷಕರರಾದ ಶ್ರೀಮತಿ ವಿದ್ಯಾ, ಭಾರತೀಯ ಅಂಚೆ ಇಲಾಖೆ ಸಿಬ್ಬಂದಿ, ಕುಣಿತ ಭಜಕರಾದ ಕು. ಸ್ಫೂರ್ತಿ, ಮ್ಯಾಜಿಕ್ ಶೋ ಶ್ರೀಮಾನ್ ರಾಜ್, ಶ್ರೀರಾಮ ಶಾಲೆಯ ಮುಖ್ಯ ಮಾತಾಜಿಯವರಾದ ಶ್ರೀಮತಿ ವಿಮಲಾ ತೇಜಾಕ್ಷಿ, ಶ್ರೀಮತಿ ಪುಷ್ಪಲತಾ, ಬಂದಾರು ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಸರೋಜಿನಿ, ಇವರುಗಳು ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ. ಪೇಪರ್ ಕ್ರಾಫ್ಟ್, ಗೂಡುದೀಪ ತಯಾರಿಕೆ, ಕಸದಿಂದ ರಸ, ಬಾಟಲ್ ಪೇಂಟಿಂಗ್, ನೃತ್ಯ ತರಬೇತಿ, ಚಿತ್ರಕಲೆ, ವ್ಯಕ್ತಿತ್ವ ವಿಕಸನ, ಮೋಜಿನ ಆಟಗಳು, ಕುಣಿತ ಭಜನೆ, ಚಿಕ್ಕ ಪ್ರವಾಸ, ಬರವಣಿಗೆ ಅಭ್ಯಾಸ, ಏರೋಬಿಕ್ಸ್,ಯೋಗ, ಮಣ್ಣಿನ ಕರಕುಶಲತೆ ತರಬೇತಿ ಯು ನಡೆಯಲಿದೆ ಎಂದು ಜೈ ಅಲೆಕ್ಕಿ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಹಾಗೂ ಮಹಿಳಾ ಸಂಘ, ಮಾತೃ ಮಂಡಳಿ, ಮಾತಾಜಿಯವರು, ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.