- Advertisement -
- Advertisement -
ಪುತ್ತೂರು: ಪ್ರಾಜೆಕ್ಟ್ ಚೀತಾ’ ಯೋಜನೆಯಲ್ಲಿ ನಮೀಬಿಯಾದಿಂದ ಭಾರತಕ್ಕೆ ಎಂಟು ಚಿರತೆಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿದೆ.

ನಮೀಬಿಯಾದಿಂದ ಚೀತಾ ತರುವ ತಂಡದಲ್ಲಿ ಭಾರತೀಯ ಪಶುವೈದ್ಯರಾಗಿ ವನ್ಯಜೀವಿ ತಜ್ಞರಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯ ಕುಟುಂಬದ ಡಾ. ಸನತ್ ಕೃಷ್ಣ ಮುಳಿಯ ಕೂಡ ಪಾಲ್ಗೊಂಡಿದ್ದರು. ಅರಿವಳಿಕೆ ತಜ್ಞರಾಗಿರುವ ಡಾ. ಸನತ್ ಕೃಷ್ಣ ರಾಜ್ಯದಲ್ಲಿ ನಡೆದಿರುವ ಹಲವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾರೆ.

ಭಾರತಕ್ಕೆ ಚೀತಾ ಸಂತತಿ ಮರು ಪರಿಚಯಿಸುವ ಕಾರ್ಯಕ್ರಮದಡಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ವಿಶೇಷ ವಿಮಾನದ ಮೂಲಕ ಎಂಟು ಚೀತಾಗಳನ್ನು ಕರೆ ತರಲಾಗಿದೆ.

- Advertisement -