Wednesday, June 26, 2024
Homeಕರಾವಳಿಮಂಗಳೂರು: ರೌಡಿ ಶೀಟರ್ ರವಿರಾಜ್ ಕೊಲೆ ಪ್ರಕರಣ: ಓರ್ವ ಯುವತಿ ಸೇರಿದಂತೆ ಒಟ್ಟು 9  ಜನರ...

ಮಂಗಳೂರು: ರೌಡಿ ಶೀಟರ್ ರವಿರಾಜ್ ಕೊಲೆ ಪ್ರಕರಣ: ಓರ್ವ ಯುವತಿ ಸೇರಿದಂತೆ ಒಟ್ಟು 9  ಜನರ ಬಂಧನ

spot_img
- Advertisement -
- Advertisement -

ಮಂಗಳೂರು: ರೌಡಿ ಶೀಟರ್ ರವಿರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಓರ್ವ ಯುವತಿ ಸೇರಿದಂತೆ ಒಟ್ಟು 9  ಜನರನ್ನು ಬಂಧಿಸಲಾಗಿದೆ.

ಸುರತ್ಕಲ್ ಇಡ್ಯಾ ನಿವಾಸಿ ಸಂದೀಪ್ (45), ಕೃಷ್ಣಾಪುರದ ಸಂದೀಪ್ ದೇವಾಡಿಗ ಯಾನೆ ಸ್ಯಾಂಡಿ (32), ಸುರತ್ಕಲ್ ತಡಂಬೈಲ್ ನಿವಾಸಿ ಲಿಖಿತ್ (31), ತೋಟಬೆಂಗ್ರೆಯ ದೀಕ್ಷಿತ್ ಯಾನೆ ಕಕ್ಕೆ ದೀಕ್ಷಿತ್ (23 ) ಮೀನಕಳಿಯ ನಿವಾಸಿ ತುಷರ್ ಅಮೀನ್ ( 30), ಪಂಜಿಮೊಗರಿನ ವಿನೋದ್ ಕುಮಾರ್ (32) ಬೈಕಂಪಾಡಿಯ ಲತೇಶ್ ಜೋಗಿ (27), ಬೈಕಂಪಾಡಿಯ ಸಂದೀಪ್ ಪುತ್ರನ್ (36), ಮೂಡುಶೆಡ್ಡೆಯ ಅಕ್ಷಿತಾ ( 28) ಬಂಧಿತರು.

ಆರೋಪಿಗಳನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಆರೋಪಿಗಳು ರವಿರಾಜ್  ಹತ್ಯೆಗೆ ಸಹಕರಿಸಿರುವ, ಸಂಚು ರೂಪಿಸಿರುವ, ಹಣಕಾಸಿನ ನೆರವು ನೀಡಿರುವ, ಕೊಲೆ ಕೃತ್ಯ ನಡೆಸಿದ ಬಳಿಕ ತಪ್ಪಿಸಿಕೊಳ್ಳಲು ಆಶ್ರಯ ನೀಡಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಶೂಟೌಟ್ ವೇಳೆ ಪೊಲೀಸರ ಗುಂಡು ತಗುಲಿ ಆಸ್ಪತ್ರೆಯಲ್ಲಿದ್ದಾರೆ. ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಲಾಗಿದೆ.

- Advertisement -
spot_img

Latest News

error: Content is protected !!