Thursday, May 16, 2024
Homeಕರಾವಳಿಮಂಗಳೂರು: ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಹೊಸದಾಗಿ ಸೇರ್ಪಡೆಯಾದ 'ರಾಣಿ'!

ಮಂಗಳೂರು: ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಹೊಸದಾಗಿ ಸೇರ್ಪಡೆಯಾದ ‘ರಾಣಿ’!

spot_img
- Advertisement -
- Advertisement -

ಮಂಗಳೂರು: ನಗರದ ಪೊಲೀಸ್ ಇಲಾಖೆಗೆ ಬಾಂಬ್‌ ಸೇರಿದಂತೆ ಮತ್ತಿತರ ಸ್ಫೋಟಕ ವಸ್ತುಗಳ ಪತ್ತೆಗೆ
ರಾಣಿಯನ್ನು ನೇಮಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ರಾಣಿ ಎಂಬ ಹೆಸರಿನ ಹೊಸ ಶ್ವಾನ ಸೇರ್ಪಡೆಯಾಗಿದೆ. ಈ ಹಿಂದೆ ನಗರ ಪೊಲೀಸ್‌ ನ ಶ್ವಾನದಳದಲ್ಲಿ 5 ಶ್ವಾನಗಳಿತ್ತು. ಅದರಲ್ಲಿ ಒಂದು ಸುಧಾ ಶ್ವಾನ ಕ್ಯಾನ್ಸರ್ ನಿಂದ ಜುಲೈ ತಿಂಗಳಲ್ಲಿ ಮೃತಪಟ್ಟಿತ್ತು. ಇದೀಗ ರಾಣಿ ಸೇರ್ಪಡೆಯಾಗಿ ಮತ್ತೆ ಮಂಗಳೂರು ಶ್ವಾನದಳಕ್ಕೆ ಬಲಬಂದಿದೆ.

ಬೆಂಗಳೂರು ಶ್ವಾನದಳ ತರಬೇತಿ ಕೇಂದ್ರದಲ್ಲಿ ಸ್ಫೋಟಕ ಪತ್ತೆ ತರಬೇತಿಯನ್ನು ಮುಗಿಸಿದ ರಾಣಿ ಶ್ವಾನವೂ ಮಂಗಳೂರು ನಗರಕ್ಕೆ ಕರ್ತವ್ಯ ನಿಯೋಜನೆಗೊಂಡಿದ್ದಾಳೆ. ಮನೋಜ್ ಶೆಟ್ಟಿ ಮತ್ತು ನಾಗೇಂದ್ರ ಇವರು ರಾಣಿಯ ಹ್ಯಾಂಡ್ಲರ್ ಆಗಿರಲಿದ್ದಾರೆ. ಈಕೆ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸ್ಫೋಟಕ ಪತ್ತೆ ಬಗ್ಗೆ ಕರ್ತವ್ಯದಲ್ಲಿ ಪೊಲೀಸರಿಗೆ ಸಹಕರಿಸಲಿದ್ದಾಳೆ.

- Advertisement -
spot_img

Latest News

error: Content is protected !!