Thursday, May 16, 2024
Homeಕರಾವಳಿಬೆಳ್ತಂಗಡಿ : ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಆಕಸ್ಮಿಕ ಬೆಂಕಿ ಪ್ರಕರಣ; ಪೊಲೀಸ್ ಹೆಡ್...

ಬೆಳ್ತಂಗಡಿ : ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಆಕಸ್ಮಿಕ ಬೆಂಕಿ ಪ್ರಕರಣ; ಪೊಲೀಸ್ ಹೆಡ್ ಕಾನ್ಟೇಬಲ್ಗೆ ಸೇರಿದ ಬೈಕ್ ಕಳ್ಳತನ

spot_img
- Advertisement -
- Advertisement -

ಬೆಳ್ತಂಗಡಿ: ನಂಬರ್ ಪ್ಲೇಟ್ ಇಲ್ಲದ ಸ್ಲೇಂಡರ್ ಬೈಕೊಂದು ಹೊತ್ತಿ ಉರಿದ ಘಟನೆ ಬೆಳ್ತಂಗಡಿ ನಗರದ ಚರ್ಚ್ ರೋಡ್ ಬಳಿ ಡಿ.31ರಂದು ಮಧ್ಯಾಹ್ನ ನಡೆದಿತ್ತು.ಇದೀಗ ಈ ಸ್ಲೇಂಡರ್ ಬೈಕ್ ಪೊಲೀಸ್ ಹೆಡ್ ಕಾನ್ಟೇಬಲ್ ಒಬ್ಬರಿಗೆ ಸೇರಿದ್ದು. ನಿಲ್ಲಿಸಿರುವಾಗ ಯಾರೋ ಕಳ್ಳತನ ಮಾಡಿ ಬರುವಾಗ ಬೆಂಕಿ ಆಕಸ್ಮಿಕವಾಗಿ ಹಚ್ಚಿಕೊಂಡಿದ್ದು. ನಂತರ ಕಳ್ಳ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.

ಬೆಳ್ತಂಗಡಿ ಚರ್ಚ್ ರೋಡ್ ನ ಸೈಂಟ್ ತೆರೇಸಾ ಹೈಸ್ಕೂಲು ಎದುರು ರಸ್ತೆಯಲ್ಲಿ ಡಿ.31 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೈಕೊಂದು ಹೊತ್ತಿ ಉರಿಯುತಿದ್ದು ಇದನ್ನು ಗಮನಿಸಿದ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಅದರೆ ಬೈಕ್ ನ ವಾರೀಸುದಾರರು ಯಾರೂ ಅಲ್ಲಿ ಇರಲಿಲ್ಲ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಬೈಕ್ ಬೆಳ್ತಂಗಡಿ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದರು.

ಬೆಳ್ತಂಗಡಿ ಪೊಲೀಸರು ಬೈಕ್ ನ ಇಂಜಿನ್ ನಂಬರ್ ಸಂಗ್ರಹಿಸಿ ಆರ್.ಟಿ.ಓ ಇಲಾಖೆಯ ಮೂಲಕ ಮಾಲೀಕನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಇದು ಉಪ್ಪಿನಂಗಡಿಯ ನಿವಾಸಿ ಪೊಲೀಸ್ ಹೆಡ್ ಕಾನ್ಟೇಬಲ್ ಒಬ್ಬರಿಗೆ ಸೇರಿದ್ದು. ಇವರು ತಮ್ಮ ಊರಿನ ಒರ್ವ ವ್ಯಕ್ತಿಗೆ ಮಾರಾಟ ಮಾಡಿದ್ದು. ನಾಲ್ಕು ದಿನದ ಬಳಿಕ ಬಂಟ್ವಾಳ ತಾಲೂಕಿನ ಅಜಿಲಮೋಗರು ಬಳಿ ನಿಲ್ಲಿಸಿ ಮಸೀದಿಗೆ ಹೋಗಿ ವಾಪಸ್ ಬರುವಾಗ ಬೈಕ್ ಕಳ್ಳತನ ಮಾಡಲಾಗಿತ್ತು.‌ಈ ಬಗ್ಗೆ ಮಾಲೀಕರಿಗೆ ಕರೆ ಮಾಡಿ ಕಳ್ಳತನ ಮಾಡಲಾಗಿದ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಡಿ.30 ರಂದು ದೂರು ನೀಡಿದ್ದರು. ಡಿ‌.31 ರಂದು ಬೆಳ್ತಂಗಡಿಯ ಚರ್ಚ್ ರೋಡ್ ಬಳಿ ಕಳ್ಳತನವಾದ ಬೈಕ್ ವಾರಸುದಾರರಿಲ್ಲದೆ ಬೆಂಕಿ ಹೊತ್ತುಕೊಂಡಿತ್ತು. ಪ್ರಕರಣ ಸಂಬಂಧ ಬೈಕ್ ಮಾಲೀಕ ಜ.1 ರಂದು ಸೂಕ್ತ ದಾಖಲೆಯನ್ನು ನೀಡಿ ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಬೈಕ್ ಕಳ್ಳತನವಾದ ಬಗ್ಗೆ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದು. ಆರೋಪಿಗಾಗಿ ಬಲೆ ಬೀಸಿದ್ದಾರೆ.

- Advertisement -
spot_img

Latest News

error: Content is protected !!