Wednesday, April 16, 2025
Homeಕರಾವಳಿಸೌತಡ್ಕ ದೇವಸ್ಥಾನದ ಉದ್ದೇಶಕ್ಕಾಗಿ ಭಕ್ತರ ನೆರವಿನಿಂದ ಖರೀದಿಸಿದ ಸ್ಥಿರಾಸ್ತಿ ಖಾಸಗಿ ಟ್ರಸ್ಟ್ ಗಳಿಗೆ ವರ್ಗಾವಣೆಗೆ ವಿರೋಧ;...

ಸೌತಡ್ಕ ದೇವಸ್ಥಾನದ ಉದ್ದೇಶಕ್ಕಾಗಿ ಭಕ್ತರ ನೆರವಿನಿಂದ ಖರೀದಿಸಿದ ಸ್ಥಿರಾಸ್ತಿ ಖಾಸಗಿ ಟ್ರಸ್ಟ್ ಗಳಿಗೆ ವರ್ಗಾವಣೆಗೆ ವಿರೋಧ; ಮರು ಹಸ್ತಾಂತರಕ್ಕೆ ಅಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ; ಸೌತಡ್ಕ ದೇವಸ್ಥಾನ ಹಿತರಕ್ಷಣಾ ವೇದಿಕೆ ರಚನೆ

spot_img
- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ದೇವಳದ ಅಭಿವೃದ್ಧಿಯ ದೃಷ್ಟಿಯಿಂದ ಸೌತಡ್ಕ ಕ್ಷೇತ್ರದ ಭಕ್ತರ, ಹಿತೈಷಿಗಳಿಂದ ಹಣ ಸಂಗ್ರಹಿಸಿ ಖರೀದಿಸಲಾಗಿದ್ದ  ಸ್ಥಿರಾಸ್ತಿಗಳನ್ನು ಮಹಾಗಣಪತಿ ಸೇವಾ ಟ್ರಸ್ಟ್ ಎಂಬ ಬೇನಾಮಿ ಟ್ರಸ್ಟ್ ಗೆ ಮತ್ತು ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಹೆಸರಿಗೆ ಅಕ್ರಮವಾಗಿ ವರ್ಗಾವಣೆಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ದೇವಳದ ಭಕ್ತಾದಿಗಳು ಪಕ್ಷ ಬೇಧ ಮರೆತು ಹೋರಾಟಕ್ಕೆ ಮುಂದಾಗಿದ್ದಾರೆ.

ಆ ಬಗ್ಗೆ ಇತ್ತೀಚೆಗೆ ಕೊಕ್ಕಡದ ಅಪೇಕ್ಷಾ ಸಭಾ ಭವನದಲ್ಲಿ   ಸೌತಡ್ಕ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ, ಕೊಕ್ಕಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಬ್ರಮಣ್ಯ ಶಬರಾಯರವರ ಅದ್ಯಕ್ಷತೆಯಲ್ಲಿ ಸಭೆ  ಸೇರಿದ ದೇವಳದ ಭಕ್ತಾಧಿಗಳು ಆ ಬಗ್ಗೆ  “ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ, ಕೊಕ್ಕಡ” ಎಂಬ ಹೆಸರಿನಲ್ಲಿ ವೇದಿಕೆ ರಚಿಸಿ ಹೋರಾಟದ ರೂಪುರೇಷೆಗಳ  ಬಗ್ಗೆ ಚರ್ಚಿಸಿದರು.

ವೇದಿಕೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ, ಉಪಾಧ್ಯಕ್ಷರುಗಳಾಗಿ ಶ್ರೀಕೃಷ್ಣ ಭಟ್ ಕುಡ್ತಲಾಜೆ, ಪ್ರಶಾಂತ ರೈ ಗೋಳಿತೊಟ್ಟು, ವಿಶ್ವನಾಥ ಶೆಟ್ಟಿ, ನೆಲ್ಯಾಡಿ, ತುಕ್ರಪ್ಪ ಶೆಟ್ಟಿ, ನೂಜಿ, ಮೋಹನ ರೈ ಕುಂಟಾಲಪಲ್ಕ, ಕಾರ್ಯದರ್ಶಿ ಯಾಗಿ ಶ್ಯಾಮರಾಜ್ ಪಟ್ರಮೆ, ಜೊತೆ ಕಾರ್ಯದರ್ಶಿಗಳಾಗಿ ಸುನೀಶ್ ನಾಯ್ಕ್, ಗಣೇಶ್ , ಕಾಶಿ, ಹರಿಶ್ಚಂದ್ರ ಜೋಡುಮಾರ್ಗ,ದಯಾನೀಶ್ ಕೊಕ್ಕಡ, ಖಜಾಂಚಿ ಯಾಗಿ ವಿಶ್ವನಾಥ ಕೊಲ್ಲಾಜೆ ಯವರುಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿ ಸದಸ್ಯರುಗಳಾಗಿ ಲಕ್ಷ್ಮೀನಾರಾಯಣ ಉಪಾರ್ಣ, ಗೋಪಾಲಕೃಷ್ಣ ಭಟ್ ಮುನ್ನಡ್ಕ, ಎ ಎನ್ ಶಬರಾಯ, ಪದ್ಮನಾಭ ಆಚಾರ್ಯ, ಚರಣ್ ಕೊಕ್ಕಡ, ಗಣೇಶ್ ಪಿ ಕೆ, ಧನಂಜಯ, ಪಟ್ರಮೆ, ಕೃಷ್ಣಪ್ಪ ಗೌಡ, ಪೂವಾಜೆ,ಧರ್ಮರಾಜ್, ಅಡ್ಕಡಿ, ಜಯಂತ ಗೌಡ,ಮಾಸ್ತಿಕಲ್ಲು, ಜಾರಪ್ಪ ಗೌಡ, ಸಂಕೇಶ, ಲಕ್ಷ್ಮೀನಾರಯಣ, ವಿಶ್ವನಾಥ ಮೀಯಾಳ, ಗಣೇಶ ಪೂಜಾರಿ, ಶೀನ ನಾಯ್ಕ ಮುಂತಾದವರನ್ನು ಸೇರಿಸಿಕೊಳ್ಳಲಾಯಿತು.  ಸಲಹೆಗಾರರಾಗಿ  ಬಿ.ಯಂ. ಭಟ್, ಪ್ರಶಾಂತ್,ವೆಂಕಟ್ರಮಣ ಡೆಂಜ ಇವರನ್ನು ಆಯ್ಕೆ ಮಾಡಲಾಯಿತು.

ಶ್ರೀ ಕ್ಷೇತ್ರದ ಜಮೀನು ಉಳಿಸಿಕೊಳ್ಳುವ ಸಲುವಾಗಿ ಸದ್ರಿ ವೇದಿಕೆ ಮೂಲಕ ಸರಕಾರವನ್ನು ಸಂಪರ್ಕಿಸುವುದು, ದರಣಿ, ಕಾನೂನು ಹೋರಾಟ, ಆಂದೋಲನಗಳನ್ನು ಕೈಗೊಳ್ಳುವ ತೀರ್ಮಾನವಾಯಿತು. ಇದೇ ನವೆಂಬರ್ 5 ರಂದು ಮಂಗಳೂರಿನಲ್ಲಿ ವೇದಿಕೆಯ ವತಿಯಿಂದ ಪತ್ರಿಕಾಗೋಷ್ಟಿ ನಡೆಸುವುದು ಎಂದು ತೀರ್ಮಾನಿಸಲಾಯಿತು. ನವೆಂಬರ್ 11 ನೇ ಸೋಮವಾರ ದಿಂದ ಸೌತಡ್ಕದಲ್ಲಿ ಅನಿರ್ಧಿಷ್ಟಾಧಿ ಧರಣಿ ಪ್ರಾರಂಭಿಸಲು ನಿರ್ಣಯಿಸಲಾಯಿತು.

- Advertisement -
spot_img

Latest News

error: Content is protected !!