Thursday, May 16, 2024
Homeಕರಾವಳಿದ.ಕ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಂಡುಬಂದಿಲ್ಲ; ಮುಂಜಾಗ್ರತೆ ಕ್ರಮ ಅಗತ್ಯ; ಡಿಎಚ್.ಓ ಡಾ. ತಿಮ್ಮಯ್ಯ

ದ.ಕ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಂಡುಬಂದಿಲ್ಲ; ಮುಂಜಾಗ್ರತೆ ಕ್ರಮ ಅಗತ್ಯ; ಡಿಎಚ್.ಓ ಡಾ. ತಿಮ್ಮಯ್ಯ

spot_img
- Advertisement -
- Advertisement -

ಮಂಗಳೂರು: ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಅವರು, ‘ನೆರೆಯ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು ಭಾಗಗಳಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೆಎಫ್‌ಡಿ ಪ್ರಕರಣ ಕಂಡುಬಂದಿಲ್ಲ,’ ಎಂದು ಸ್ಪಷ್ಟನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ್ವರ ಸಹಿತ ಸಂಶಯಾಸ್ಪದ ಲಕ್ಷಣ ಕಂಡುಬಂದರೆ ಅಂತಹವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಕಳುಹಿಸುತ್ತೇವೆ. ಸಾಮಾನ್ಯವಾಗಿ ಹೊಂದಿಕೊಂಡಿರುವ ಭಾಗ, ಅರಣ್ಯಕ್ಕೆ ತೆರಳುವ ಮಂದಿಗೆ ಈ ರೋಗದ ಭೀತಿ ಇರುತ್ತದೆ. ಈ ಅರಣ್ಯ ಪ್ರದೇಶಕ್ಕೆ ವರ್ಷ ಜಿಲ್ಲೆಯಲ್ಲಿ ಒಂದು ಮಂಗನ ಸಾವು ಪ್ರಕರಣ ದಾಖಲಾಗಿದ್ದು, ಅದು ವಿಷಪ್ರಾಶನದಿಂದ ಆಗಿರುವುದು,’ ಎಂದು ಸ್ಪಷ್ಟಪಡಿಸಿದರು.

- Advertisement -
spot_img

Latest News

error: Content is protected !!