Thursday, May 16, 2024
Homeತಾಜಾ ಸುದ್ದಿಮೂಲ್ಕಿ: ಆಮಂತ್ರಣ ಪತ್ರ, ಬ್ಯಾನರ್ ಗಳಲ್ಲಿ ದೈವದ ಚಿತ್ರ, ದೈವಸ್ಥಾನದ ಚಿತ್ರಗಳನ್ನು ಮುದ್ರಿಸುವಂತಿಲ್ಲ: ದೈವಾರಾಧನೆಯಲ್ಲಿ ಶಿಸ್ತು...

ಮೂಲ್ಕಿ: ಆಮಂತ್ರಣ ಪತ್ರ, ಬ್ಯಾನರ್ ಗಳಲ್ಲಿ ದೈವದ ಚಿತ್ರ, ದೈವಸ್ಥಾನದ ಚಿತ್ರಗಳನ್ನು ಮುದ್ರಿಸುವಂತಿಲ್ಲ: ದೈವಾರಾಧನೆಯಲ್ಲಿ ಶಿಸ್ತು ರೂಢಿಸಲು ಮೂಲ್ಕಿ ಒಂಬತ್ತು ಮಾಗಣೆಯಿಂದ ಹಲವು ನಿರ್ಣಯ

spot_img
- Advertisement -
- Advertisement -

ಮೂಲ್ಕಿ: ದೈವಸ್ಥಾನಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಆಮಂತ್ರಣ ಪತ್ರ ಮತ್ತು ಬ್ಯಾನರ್ ಗಳಲ್ಲಿ ದೈವದ ಚಿತ್ರ, ನೇಮ ಕಟ್ಟುವವರ ಭಾವಚಿತ್ರ, ಗಗ್ಗರ, ಕೊಡಿ ಅಡಿ, ದೈವಸ್ಥಾನದ ಚಿತ್ರಗಳನ್ನು ಮುದ್ರಿಸದಂತೆ ಮೂಲ್ಕಿ ಒಂಬತ್ತು ಮಾಗಣೆ ವ್ಯಾಪ್ತಿಯ ದೈವಸ್ಥಾನದ ಜಾಗ-ಜಾಗೆ ಚಾಕರಿ ಮುಖ್ಯಸ್ಥರ ಸಭೆಯು ತೀರ್ಮಾನಿಸಿದೆ.

ದೈವಸ್ಥಾನ ಮತ್ತು ದೈವದ ಚಾಕರಿಯನ್ನು ನಿಯಮ ಬದ್ಧಗೊಳಿಸಿ ಶಿಸ್ತನ್ನು ರೂಢಿಸುವ ಉದ್ದೇಶದಿಂದ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

• ರಾಜನ್ ದೈವದ ಗಡಿ ಪ್ರದಾನ ಆದವರು ಕುಟುಂಬದ ದೈವಗಳ ಚಾಕರಿ ಮಾಡಲು ಅವಕಾಶ ಇಲ್ಲ. ದರ್ಶನ, ಆವೇಶದಂತಹ ಸಂದರ್ಭಗಳಲ್ಲಿ ಅವರನ್ನು ಹಿಡಿಯುವವರು ಪ್ಯಾಂಟ್, ಶರ್ಟು ಧರಿಸುವಂತಿಲ್ಲ. ಆರಾಧನೆಗೆ ಗುಡ್ಡೆ ಕೇಪುಳ ಹೂಗಳನ್ನೇ ಬಳಸಬೇಕು, ಗಂಧ ಇತ್ಯಾದಿ ವಸ್ತುಗಳನ್ನು ಸ್ಥಳದಲ್ಲಿಯೇ ತಯಾರಿಸಬೇಕು. ಯಾವುದೇ ರಾಸಾಯನಿಕ ಬಳಸಿರಬಾರದು.

• ಈ ಗ್ರಾಮದ ರಾಜನ್ ದೈವಗಳ ಮಣೆಮಂಚ, ಮೊಗ, ಮೂರ್ತಿಗಳನ್ನು ಚಾಕರಿಯವರ ಹೊರತು ಯಾರೂ ಮುಟ್ಟುವಂತಿಲ್ಲ ಗ್ರಾಮದಲ್ಲಿ ಗಡಿ ಪ್ರಧಾನ ಚಾಕರಿಯವರು ಇಲ್ಲದಿದ್ದಲ್ಲಿ ನೆರೆ ಗ್ರಾಮದಿಂದ ಕರೆದು ಮಾಡಿಸಬಹುದು. ಭಂಡಾರ ಇಳಿಯುವ ಸಂದರ್ಭ ಮೊಗ ಮೂರ್ತಿಯನ್ನು ಚಾಕರಿಯವರು ಹಿಡಿಯಬೇಕು. ಉಳಿದ ನಗ ನಾಣ್ಯವನ್ನು ಶುದ್ದಾಚಾರದೊಂದಿಗೆ ಇರುವ ಇತರರು ಹಿಡಿಯಬಹುದು.

• ನೇಮದ ಸಂದರ್ಭ ಬಂಡಿ ಸವಾರಿ (ದೇವರ ಭೇಟಿ) ಬೆಳಗ್ಗಿನ ಜಾವದಲ್ಲಿಯೇ ನಡೆಯಬೇಕು.

• ನೇಮದಲ್ಲಿ ಬೀರ ಹೇಳಲೇಬೇಕು.ದೈವದ ಪಾತ್ರಿ, ಚಾಕರಿ, ಜೀಟಿಗೆ, ಬೊಲ್ಕುಡೆ ನೇಮ ಕಟ್ಟುವವರು ಗ್ರಾಮ ಸಂಬಂಧ ಪಟ್ಟವರಿಗೆ ಪ್ರಾತಿನಿಧ್ಯ ನೀಡಬೇಕು. ಚಾಕರಿಯವರ ಆಮೆ ಕರ ಸೂತಿಕೆಯು ಆಯಾಯ ಗ್ರಾಮಕ್ಕೆ ಸಂಬಂಧಪಟ್ಟ ಕಟ್ಟುಪಾಡಿನಂತೆ ಮುಂದುವರಿಯುವುದು. ಹೀಗೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

- Advertisement -
spot_img

Latest News

error: Content is protected !!