Wednesday, May 15, 2024
Homeಕರಾವಳಿಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಮಂಗಳೂರಿನ ಕುವರಿ!

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಮಂಗಳೂರಿನ ಕುವರಿ!

spot_img
- Advertisement -
- Advertisement -

ಮಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ನಾಳೆಯಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಪರೀಕ್ಷೆಯ ಆತಂಕದಲ್ಲಿದ್ದರೆ ಮಂಗಳೂರಿನ ಆದಿ ಸ್ವರೂಪ ಎಂಬ ವಿದ್ಯಾರ್ಥಿನಿ ಎಸ್‌ಎಸ್‌ಎಲ್‌ಸಿ ಸಂಪೂರ್ಣ ಪಠ್ಯವನ್ನು ಚಿತ್ರಗಳಲ್ಲೇ ಬಿಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಎಸ್‌ಎಸ್‌ಎಲ್‌ಸಿಯ ಆರು ವಿಷಯಗಳನ್ನು ಕೇವಲ ಎ4 ಗಾತ್ರದ ಎಂಟು ಹಾಳೆಗಳಲ್ಲಿ ಬಿಡಿಸಿರುವ ಆದಿ ಸ್ವರೂಪ, ಸೋಮವಾರ ಪರೀಕ್ಷೆ ಬರೆದು ಗರಿಷ್ಠ ಅಂಕ ಪಡೆಯುವ ವಿಶ್ವಾಸ ಇಟ್ಟುಕೊಂಡಿದ್ದಾಳೆ. ಸ್ಮರಣ ಶಕ್ತಿ ಹಾಗೂ ಮೆದುಳಿನ ಬೆಳವಣಿಗೆಗೆ ಆದಿ ಸ್ವರೂಪ ಬಿಡಿಸಿರುವ ಚಿತ್ರಗಳು ಸಹಕಾರಿಯಾಗಲಿದ್ದು ಇದು ವಿಶುವಲ್ ಆರ್ಟ್ ಮಾದರಿಯಲ್ಲಿದೆ. ಅಲ್ಲದೇ ಇತರ ಮಕ್ಕಳಿಗೂ ಮುಂದೆ ಪ್ರಯೊಜನವಾಗುವುದರ ಜೊತೆಗೆ ಇತರ ಮಕ್ಕಳಿಗೆ ಪ್ರೇರಣೆಯಾಗಲೆಂದು ಚಿತ್ರದಲ್ಲಿ ಪಠ್ಯವನ್ನು ದಾಖಲಿಸಿರುವುದಾಗಿ ದಾಖಲೆ ಆದಿ ಸ್ವರೂಪ ಹೇಳಿಕೊಂಡಿದ್ದಾಳೆ.

- Advertisement -
spot_img

Latest News

error: Content is protected !!