Wednesday, June 26, 2024
Homeತಾಜಾ ಸುದ್ದಿಬೆಳ್ತಂಗಡಿ: ಮೊದಲ ಐಎಂ ನಾರ್ಮ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಇಶಾ ಶರ್ಮಾ: ಕರ್ನಾಟಕದಲ್ಲೇ ಮೊದಲ ಮಹಿಳಾ ಇಂಟರ್‌ನ್ಯಾಷನಲ್‌...

ಬೆಳ್ತಂಗಡಿ: ಮೊದಲ ಐಎಂ ನಾರ್ಮ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಇಶಾ ಶರ್ಮಾ: ಕರ್ನಾಟಕದಲ್ಲೇ ಮೊದಲ ಮಹಿಳಾ ಇಂಟರ್‌ನ್ಯಾಷನಲ್‌ ಮಾಸ್ಟರ್

spot_img
- Advertisement -
- Advertisement -

ಬೆಳ್ತಂಗಡಿ: ಜು. 18 ರಂದು ಮುಕ್ತಾಯಗೊಂಡ ಪ್ಲೋವಾಕಿಯಾ ಓಪನ್ ಚೆಸ್ 2022ರ ಪಂದ್ಯಾವಳಿಯಲ್ಲಿ ಕರ್ನಾಟಕದ ಪ್ರತಿಭೆ ಇಶಾ ಶರ್ಮಾ ತನ್ನ ಚೊಚ್ಚಲ ಅಂತರರಾಷ್ಟ್ರೀಯ ಮಾಸ್ಟರ್ ಮತ್ತು ಒಮನ್ ಗ್ಯಾಂಗ ಮಾಸ್ಟರ್ ನಾರ್ಮ್ ಮುಡಿಗೇರಿಸಿದ್ದಾರೆ.

ಮೂರನೇ ಸುತ್ತಿನಲ್ಲಿ ಇಶಾ ಪೋಲಿಷ್ ದಂತಕಥೆ ಗ್ರಾಂಡ್‌ಮಾಸ್ಟರ್ ಕ್ರಾಸೆಂಕೋವ್ ಮಿಚಾಲ್ (2569) ವಿರುದ್ಧ ಮಿಂಚಿನ ಗೆಲುವು ಸಾಧಿಸಿದರು. ಇದು ಅವರ ಈವರೆಗಿನ ಅತ್ಯುತ್ತಮ ಗೆಲುವಾಗಿದೆ. ಇಶಾ FIDE ತರಬೇತುದಾರ ಕೆ.ವಿಶ್ವೇಶ್ವರನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಇಶಾ ಧರ್ಮಸ್ಥಳ ಸಮೀಪದ ಉಜಿರೆಯ ಎಸ್‌ಡಿಎಂ ಕಾಲೇಜಿನ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ) ನಲ್ಲಿ ಅಂತಿಮ ವರ್ಷದ ಅರ್ಥಶಾಸ್ತ್ರ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕರ್ನಾಟಕದ ಮೊದಲ ಮಹಿಳಾ ಇಂಟರ್‌ನ್ಯಾಶನಲ್ ಮಾಸ್ಟರ್ ಆಗಿದ್ದಾರೆ.

ಐ.ಎಂ. ನಾರ್ಮ್ ಗೆಲುವಿನ ಹಾದಿಯಲ್ಲಿ ಇಶಾ ಮೊದಲಿಗೆ ಅಧಿಕ ಶ್ರೇಯಾಂಕದ ಗ್ಲೋವಾಕಿಯಾದ ಐಎಂ ನ್ಯೂಗೆಬೌ‌ ಮಾರ್ಟಿನ್ (2528) ಅವರನ್ನು ಸೋಲಿಸಿದರು ಮತ್ತು ಐಸ್‌ಲ್ಯಾಂಡ್‌ನ ಐಎಂ ಸ್ಟೆಫಾನ್ಸನ್ ವಿಗ್ನಿರ್ ವಟ್ನಾ‌ ಅವರೊಂದಿಗೆ ಡ್ರಾ ಮಾಡಿಕೊಂಡರು.

- Advertisement -
spot_img

Latest News

error: Content is protected !!