Tuesday, June 18, 2024
Homeತಾಜಾ ಸುದ್ದಿಬೆಳ್ತಂಗಡಿ: ಬಾವುಟಗುಡ್ಡೆಯಲ್ಲಿ ಸ್ವಾತಂತ್ರ್ಯ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆ: ಬಂಟ್ವಾಳದಲ್ಲಿ ಸ್ಮಾರಕ...

ಬೆಳ್ತಂಗಡಿ: ಬಾವುಟಗುಡ್ಡೆಯಲ್ಲಿ ಸ್ವಾತಂತ್ರ್ಯ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆ: ಬಂಟ್ವಾಳದಲ್ಲಿ ಸ್ಮಾರಕ ಉಸ್ತುವಾರಿ ಸಮಿತಿಯಿಂದ ಅದ್ಧೂರಿ ಸ್ವಾಗತ: ಶಾಸಕ ಹರೀಶ್‌ ಪೂಂಜಾ ಮಾಹಿತಿ

spot_img
- Advertisement -
- Advertisement -

ಬೆಳ್ತಂಗಡಿ: ಸ್ವಾತಂತ್ರ್ಯ ಸಮರವೀರ ತುಳುನಾಡಿನ ಕೆಚ್ಚೆದೆಯ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಹರೀಶ್‌ ಪೂಂಜಾ, ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಕೆದಂಬಾಡಿ ರಾಮಯ್ಯ ಗೌಡರ ಪಾತ್ರ ಮಹತ್ವದ್ದು. ಭರತ ಖಂಡದ 1837ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಮೊದಲ ದಂಡನಾಯಕನ ಜೀವನದ ಬಗ್ಗೆ ಇಂದಿನ ಹಾಗೂ ಮುಂದಿನ ಪೀಳಿಗೆಗೂ ಅರಿವು ಮೂಡಿಸುವ ಕಾರ್ಯ ಆಗ್ಬೇಕು. ಹಾಗೇ ಈ ಮಹಾಪುರುಷನ ಹೆಸರು ಶಾಶ್ವತವಾಗಿ ನೆಲೆವೂರಲು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ್ಯ ವೀರ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದರು.

ಆಗಸ್ಟ್ 28 ರಂದು ಆಂದ್ರಪ್ರದೇಶದ ವಿಜಯವಾಡದಿಂದ ಆದಿ ಚುಂಚನಗಿರಿ ಮಹಾಸಂಸ್ಥಾನಕ್ಕೆ ಆಗಮಿಸಲಿರುವ ಪ್ರತಿಮೆಯನ್ನು ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮಿಜಿ ಸ್ವಾಗತಿಸಲಿದ್ದಾರೆ.ಆಗಸ್ಟ್ 29 ರಂದು ಮಂಗಳೂರಿಗೆ ಆಗಮಿಸಲಿರುವ ಪ್ರತಿಮೆಯನ್ನು ಸುಳ್ಯ ಪುತ್ತೂರು, ಬಂಟಾ ವಾಣಿ ಶಾಲೆ ವಠಾರದಿಂದ ಬಂಟ್ವಾಳಕ್ಕೆ ಬೃಹತ್ ವಾಹನ ಜಾಥದ ಮೂಲಕ ಸಾಗಿ ಪ್ರತಿಮೆಯನ್ನು ಸ್ವಾಗತಿಸಲಾಗುವುದು ಎಂದರು.

- Advertisement -
spot_img

Latest News

error: Content is protected !!