Sunday, May 5, 2024
Homeಕರಾವಳಿಬಂಟ್ವಾಳ: ಹಿಂಸಾತ್ಮಕ ರೀತಿಯಲ್ಲಿ ಗೂಡ್ಸ್ ಆಟೋದಲ್ಲಿ  ಜಾನುವಾರುಗಳ ಸಾಗಾಟ: ಆರೋಪಿಯನ್ನು ಬಂಧಿಸಿದ ಪೊಲೀಸರು

ಬಂಟ್ವಾಳ: ಹಿಂಸಾತ್ಮಕ ರೀತಿಯಲ್ಲಿ ಗೂಡ್ಸ್ ಆಟೋದಲ್ಲಿ  ಜಾನುವಾರುಗಳ ಸಾಗಾಟ: ಆರೋಪಿಯನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

ಬಂಟ್ವಾಳ: ಹಿಂಸಾತ್ಮಕ ರೀತಿಯಲ್ಲಿ ಗೂಡ್ಸ್ ಆಟೋದಲ್ಲಿ  ಜಾನುವಾರುಗಳ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು  ಪೊಲೀಸರು ಬಂಧಿಸಿದ ಘಟನೆ ಬಂಟ್ವಾಳ ದಲ್ಲಿ ನಡೆದಿದೆ.

ಟೆಂಪೋದಲ್ಲಿ ಜಾನುವಾರು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮಾಂತರ ಎಸ್ ಐ ಹರೀಶ್ ನೇತೃತ್ವದ ಪೋಲಿಸ್ ತಂಡ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಹಾಗೂ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ಕಾರ್ಯಾಚರಣೆ ವೇಳೆ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಅಬ್ದುಲ್ ಹಮೀದ್ ಬಂಧಿತ ಆರೋಪಿಯಾಗಿದ್ದು, ಅಬ್ಬಾಸ್ ಪರಾರಿಯಾಗಿದ್ದಾನೆ.

ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಮನೆಕಳ್ಳತನ ಹಾಗೂ ದನ ಕಳ್ಳತನ ಪ್ರಕರಣಗಳನ್ನು ಕಂಡು ಬಂದಿದ್ದು ಈ ಹಿನ್ನೆಲೆ ಯಲ್ಲಿ ಗ್ರಾಮಾಂತರ ಠಾಣಾ ಎಸ್. ಐ
ಹರೀಶ್ ನೇತೃತ್ವದ ತಂಡ ರಾತ್ರಿ ರೌಂಡ್ಸ್ ಕಾರ್ಯಚರಣೆ ನಡೆಸುತ್ತಿದ್ದರು.

ಈ ವೇಳೆ ಬೆಳಗಿನ ಜಾವ 5 ಗಂಟೆ ಗೆ ಮಂಚಿಕಟ್ಟೆಯಲ್ಲಿ ವಾಹನವೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಲು ಮುಂದಾದಾಗ ಚಾಲಕ ವಾಹನ ನಿಲ್ಲಿಸದೆ ಮುಂದೆ ಹೋದ, ಕೂಡಲೆ ಪೋಲಿಸ್ ವಾಹಮ ಬೆನ್ನಟ್ಟಿ ವಾಹನ ತಡೆದು ನಿಲ್ಲಿಸಿದಾಗ ಚಾಲಕನ ಬದಿಯ ಸೀಟಿನಲ್ಲಿ ಕುಳಿತ ಆರೋಪಿ ಟೆಂಪೋ ದಿಂದ ಹಾರಿ ಓಡಿ ಹೋಗಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೋಲಿಸರು ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಟೆಂಪೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ದನಗಳನ್ನು ವದೆ ಮಾಡುವ ಉದ್ದೇಶದಿಂದ ಸಾಗಿಸುವ ಬಗ್ಗೆ ಒಪ್ಪಿಕೊಂಡಿದ್ದಾನೆ.

ಟೆಂಪೋ ಸಹಿತ ಜಾನುವಾರುಗಳ ಒಟ್ಟು ಮೌಲ್ಯ 1,50,000 ಆಗಿದೆ.ಒಂದು ದನ ಹಾಗೂ ಎರಡು ಗಂಡು ಕರುಗಳನ್ನು ಕೈಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿತ್ತು.

- Advertisement -
spot_img

Latest News

error: Content is protected !!