Monday, July 7, 2025
Homeಕರಾವಳಿಮಂಗಳೂರುಬೆಳ್ತಂಗಡಿ : ಹರೀಶ್ ಪೂಂಜ ಅವರು ಸರಕಾರದಿಂದ ತಾಲೂಕಿಗೆ ಬಂದಿರುವ ಅನುದಾನಗಳನ್ನು ಸಮರ್ಪಕವಾಗಿ ವಿನಿಯೋಗಿಸಿಲ್ಲ: ಕೆ.ಪಿ.ಸಿ.ಸಿ...

ಬೆಳ್ತಂಗಡಿ : ಹರೀಶ್ ಪೂಂಜ ಅವರು ಸರಕಾರದಿಂದ ತಾಲೂಕಿಗೆ ಬಂದಿರುವ ಅನುದಾನಗಳನ್ನು ಸಮರ್ಪಕವಾಗಿ ವಿನಿಯೋಗಿಸಿಲ್ಲ: ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪ

spot_img
- Advertisement -
- Advertisement -

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ಅವರು ಸರಕಾರದಿಂದ ತಾಲೂಕಿಗೆ ಬಂದಿರುವ ಅನುದಾನಗಳನ್ನು ಸಮರ್ಪಕವಾಗಿ ವಿನಿಯೋಗಿಸದೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದರಲ್ಲಿಯೇ ನಿರತರಾಗಿದ್ದಾರೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಜುಲೈ.7 ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಯಾವುದೇ ಅನುದಾನಗಳಿಗೆ ತಡೆಹಿಡಿದಿಲ್ಲ ಶಾಸಕರೇ ಇಲ್ಲದ ಅನುದಾವಿದೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದಾರೆ.  ಕಳೆದ ವರ್ಷದ ಮಳೆಹಾನಿಗೆ ಬಂದಿರುವ ಹತ್ತು ಕೋಟಿ ಅನುದಾನ ಇನ್ನೂ ಬಳಕೆಯಾಗಿಲ್ಲ ಎಂದು ಆರೋಪಿಸಿದ ಅವರು ಜಿಲ್ಲೆಯ ಇತರ ತಾಲೂಕುಗಳಲ್ಲಿ ಈ ಅನುದಾನ ಬಳಕೆಯಾಗಿ ಹೆಚ್ಚುವರಿ ಅನುದಾನಕ್ಕೆ ಶ್ರಮಿಸುತ್ತಿದ್ದಾರೆ,  ಇದು ಯಾರ ವೈಫಲ್ಯ ಎಂದು ಪ್ರಶ್ನಿಸಿದರು.

ಶಾಸಕರು ಕಳೆದ ಚುನಾವಣೆಯ ಸಂದರ್ಭದಲ್ಲಿ ಹಲವು ಕಡೆ ಹೋಗಿ ಶಂಕುಸ್ಥಾಪನೆಯ ನಾಟಕ ಮಾಡಿದ್ದಾರೆ. ಆದರೆ ಈ ಯಾವ ಕಾಮಗಾರಿಗೂ ಅನುದಾನ ಮಂಜೂರಾಗಿರಲಿಲ್ಲ ಅದೇ ಈಗ ಸಮಸ್ಯೆಯಾಗಿದೆ.ಉಪ್ಪಿನಂಗಡಿ ಗುರುವಾಯನಕೆರೆ ರಸ್ತೆಗೆ ಕೇಂದ್ರ ಅನುದಾನ ಮಂಜೂರಾಗಿದೆ ಎಂದು ಹೇಳಿ ಶಾಸಕರು ಶಂಕುಸ್ಥಾಪನೆ ಮಾಡಿದರು. ಈಗ ಬರೇ ಹತ್ತು ಕಿ.ಮೀ ಮಾತ್ರ ಮಾಡಿ ಬಿಟ್ಟಿದ್ದಾರೆ. ಇದೀಗ ಬೀದಿಯಲ್ಲಿ ನಿಂತು ಮಾತನಾಡುತ್ತಿದ್ದಾರೆ. ಉಪ್ಪಿನಂಗಡಿ ರಸ್ತೆ ಸಂಪೂರ್ಣ ಅಭಿವೃದ್ಧಿಯಾಗುತ್ತದೆ ಎಂದೇ ನಾವು ಭಾವಿಸಿದ್ದೆವು ಅವರಿಂದ ಸಾಧ್ಯವಿಲ್ಲದಿದ್ದರೆ ನಾವು ಲೋಕೋಪಯೋಗಿ ಸಚಿವರ ಬಳಿ ಹೋಗುತ್ತೇವೆ ರಸ್ತೆಗೆ ಅನುದಾನ ತರಿಸುವ ಪ್ರಯತ್ನ ಮಾಡುತ್ತೇವೆ ಎಂದರು.ತಾಲೂಕಿಗೆ ವಿವಿಧ ಯೋಜನೆಗಳಲ್ಲಿ ಅನುದಾನಗಳು ಸರಕಾರದಿಂದ ಮಂಜೂರಾಗುತ್ತಿದೆ ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ತರಲು ನಾವೂ ಪ್ರಯತ್ನಿಸುತ್ತೇವೆ ಶಾಸಕರೂ ಈ ನಿಟ್ಟಿನಲ್ಲಿ ಪ್ರಯತ್ನಿಸಲಿ ಎಂದರು.

ಮರಳು ಮತ್ತು ಕೆಂಪು ಕಲ್ಲಿನ ವಿಚಾರವಾಗಿ ರಾಜ್ಯ ಸರಕಾರ ಸ್ಥಳೀಯ ಅಧಿಕಾರಿಳ ಹಾಗೂ ಜನಪ್ರತಿನಿಧಿಗಳ ವಿಶೇಷ ಸಭೆಯನ್ನು ಕರೆದಿದ್ದು ಇಲ್ಲಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಸೂಕ್ತ ಪರಿಹಾರ ಕೆಲವೇ ದಿನಗಳಲ್ಲಿ ಸಿಗಲಿದೆ. ಈಗ ಅಕ್ರಮ ಮರಳು ಗಣಿಗಾರಿಕೆ ಸಂಪೂರ್ಣವಾಗಿ ನಿಂತಿದ್ದು ಜಿಲ್ಲೆಯ ನದಿಗಳನ್ನು ಉಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ವಿಚಾರವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗೇಶ್ ಕುಮಾರ್ ಗೌಡ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಗ್ರಾಮೀಣ  ಸಂತೋಷ್ ಕುಮಾರ್ ಜಿಲ್ಲಾ ಕೆಡಿಪಿ ಸದಸ್ಯರು,  ಪದ್ಮನಾಭ ಸಾಲಿನ್ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು,  ಕೇಶವ ಪಿ ಬೆಳಾಲು ಕೆಪಿಸಿಸಿ ಸದಸ್ಯರು, ನಮಿತಾ ಕೆ ಪೂಜಾರಿ  ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ,  ಪಿ.ಟಿ  ಸೆಬಸ್ಟಿನ್

 ಅಧ್ಯಕ್ಷರು ಗ್ರಾಮೀಣ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ, ಜಗದೀಶ್ ಡಿ, ಪಟ್ಟಣ ಪಂಚಾಯತು ಸದಸ್ಯರು, ಶೋಭಾ ನಾರಾಯಣಗೌಡ ಅಧ್ಯಕ್ಷರು ಮಹಿಳಾ ಕಾಂಗ್ರೆಸ್ ಗ್ರಾಮೀಣ ಸಮಿತಿ, ಆಯುಬ್  ಡಿ.ಕೆ ತಾಲೂಕು ಅಕ್ರಮ ಸಕ್ರಮ ಸಮಿತಿ,ಮಹಮದ್ ಅಜರ್  ಅಧ್ಯಕ್ಷರು ಯುವ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ, ಹಕೀಂ ಕೊಕ್ಕಡ  ಅಧ್ಯಕ್ಷರು ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ,  ರೊಯಿ ಪುದುವೆಟ್ಟು ಅಧ್ಯಕ್ಷರು ಪಂಚಾಯತ್ ರಾಜ್ ಸಂಘಟನೆ, ಹಾಗೂ ಇತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!