Sunday, June 7, 2026
Homeತಾಜಾ ಸುದ್ದಿಅರಂತೋಡು: ಧಾರಕಾರ ಮಳೆಗೆ ಬಾಳೆಕಜೆ ರಸ್ತೆ ಮೇಲೆ ಗುಡ್ಡ ಕುಸಿತ: ತೊಡಿಕಾನ ಗ್ರಾಮದ ಸಂಪರ್ಕ ಕಡಿತ

ಅರಂತೋಡು: ಧಾರಕಾರ ಮಳೆಗೆ ಬಾಳೆಕಜೆ ರಸ್ತೆ ಮೇಲೆ ಗುಡ್ಡ ಕುಸಿತ: ತೊಡಿಕಾನ ಗ್ರಾಮದ ಸಂಪರ್ಕ ಕಡಿತ

- Advertisement -
- Advertisement -

ಅರಂತೋಡು: ಸುಳ್ಯ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆ ಹಿನ್ನಲೆಯಲ್ಲಿ ತೊಡಿಕಾನ ಮಾವಿನಕಟ್ಟೆ ಮುತ್ತುಕೋಡಿ ಬಾಳೆಕಜೆ ರಸ್ತೆಗೆ ಗುಡ್ಡ ಕುಸಿದು ಬಿದ್ದು ರಸ್ತೆ ಬಂದ್ ಆಗಿದೆ.

ಇದರಿಂದ ಸ್ಥಳೀಯ ಜನರು ಸಮಸ್ಯೆಗೊಳಗಾಗಿದ್ದು ತೊಡಿಕಾನ ಗ್ರಾಮದೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ. ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಗಮನಹರಿಸಿ ರಸ್ತೆಗೆ ಬಿದ್ದ ಗುಡ್ಡವನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ರಸ್ತೆ ತಡೆ ಉಂಟಾಗಿರುವ ಸಮಸ್ಯೆಯನ್ನು ಸ್ಥಳೀಯರು ಗ್ರಾಮ ಪಂಚಾಯತ್ ನ ಗಮನಕ್ಕೆ ತಂದಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೂಕ್ತ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಸ್ತೆ ಸಂಪೂರ್ಣ ಬಂದಾಗಿರುವ ಹಿನ್ನೆಲೆಯಲ್ಲಿ ಈಗ ಸ್ಥಳೀಯ ನಾಗರಿಕರು ರಸ್ತೆಯಲ್ಲಿ ಕಾಲುದಾರಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

- Advertisement -

Latest News

error: Content is protected !!