
ಬಂಟ್ವಾಳ : ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಕವಸ್ತು ಪ್ರಕರಣದಲ್ಲಿ ಸುಮಾರು ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ಕೇರಳದ ಮಂಜೇಶ್ವರದಲ್ಲಿ ಬಂಧಿಸಿದ್ದಾರೆ.
ಪುಂಜಾಲಕಟ್ಟೆ ಠಾಣಾ ಅಕ್ರ: 98/2019, ಕಲಂ 27(b) NDPS ಕಾಯ್ದೆ ಹಾಗೂ ಬಂಟ್ವಾಳದ ಮಾನ್ಯ ಹಿರಿಯ ನ್ಯಾಯಾಲಯದ ಸಿಸಿ ನಂ. 08/2020 ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಸಂತೆ ಮಾರ್ಕೆಟ್ ರೋಡ್ ನಿವಾಸಿ ರಿಜ್ವಾನ್ ಮಗ ಎಂ.ಡಿ. ಸೈಫ್ ಅಲಿಯಾಸ್ ಮೊಹಮ್ಮದ್ ಸೈಫ್ (32) ಎಂಬಾತನನ್ನು ಆ.13ರಂದು ಕೇರಳ ರಾಜ್ಯದ ಮಂಜೇಶ್ವರದ ಕಡಂಬಾರು ಎಂಬಲ್ಲಿಂದ ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಸಂಜೆ ಹಾಜರುಪಡಿಸಿದ್ದು. ನ್ಯಾಯಾಲಯ ಆರೋಪಿಗೆ 10 ಸಾವಿರ ದಂಡ ವಿಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ.ಸಿ.ಕೆ ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ಮಾರ್ಗದರ್ಶನದಲ್ಲಿ, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಶ್ ಕೆ.ವಿ ನೇತೃತ್ವದ ಸಿಬ್ಬಂದಿ ಹೆಚ್‌ಸಿ ರಾಜೇಶ್, ಪಿಸಿ ಚೋಳಪ್ಪ ಸಂಶಿ, ಪಿಸಿ ನಾಗರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


