Friday, August 28, 2026
Homeಅಪರಾಧಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ; ಆರೋಪಿ ಸಮುದ್ರದ ಮೂಲಕ ಪರಾರಿಯಾಗುವ ಸಾಧ್ಯತೆ; ಮಂಗಳೂರು ಕರಾವಳಿ ಕಾವಲು...

ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ; ಆರೋಪಿ ಸಮುದ್ರದ ಮೂಲಕ ಪರಾರಿಯಾಗುವ ಸಾಧ್ಯತೆ; ಮಂಗಳೂರು ಕರಾವಳಿ ಕಾವಲು ಪಡೆಯಿಂದ ಸಮುದ್ರದಲ್ಲಿ ಸರ್ಚಿಂಗ್

- Advertisement -
- Advertisement -

ಮಂಗಳೂರು: ಬೆಂಗಳೂರಿನಲ್ಲಿ ನಡೆದ ಮಲ್ಲೇಶ್ವರಂ ಕೆಫೆ ಮೇಲೆ ಬಾಂಬ್ ಬ್ಲಾಸ್ಟ್ ಮಾಡಿದ ಶಂಕಿತ ಉಗ್ರನಿಗಾಗಿ ಪೊಲೀಸರು ರಾಜ್ಯಾದ್ಯಂತ ಹುಡುಕಾಟ ನಡೆಸುತ್ತಿದ್ದಾರೆ.

ಶಂಕಿತ ಉಗ್ರ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಚಾರಿಸುತ್ತಿದ್ದಾನೆ. ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಸಮುದ್ರದ ಮಾರ್ಗ ಮೂಲಕ ಪರಾರಿಯಾಗುವ ಸಾಧ್ಯತೆ ಇರುವ ಕಾರಣದಿಂದ ಎನ್.ಐ.ಎ ಅಧಿಕಾರಿಗಳ ಮಾಹಿತಿ ಮೇರೆಗೆ ಮಂಗಳೂರು ಕರಾವಳಿ ಕಾವಲು ಪಡೆ ತಂಡ ಮಂಗಳೂರು ಸಮುದ್ರದಲ್ಲಿ ಓಡಾಡುವ ದೋಣಿ, ಬೋಟ್ ಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರು ಕರಾವಳಿ ಕಾವಲು ಪಡೆ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ನೇತೃತ್ವದಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿಗಳು ಮಂಗಳೂರು ಸಮುದ್ರದಲ್ಲಿ ಓಡಾಡುವ ಪ್ರತಿ ಬೋಟ್, ದೋಣಿಗಳ ತಪಾಸಣೆ ಬಿಗಿಗೊಳಿಸಿದ್ದಾರೆ.

- Advertisement -

Latest News

error: Content is protected !!