Thursday, April 24, 2025
Homeಕರಾವಳಿಮಂಗಳೂರುಕಡಬ; ಮಧ್ಯಾಹ್ನ ಊಟ ಮಾಡಿಸಿ ಮಲಗಿಸಿದ್ದ ಎರಡೂವರೆ ವರ್ಷದ ಕಂದಮ್ಮ ಸಾವು

ಕಡಬ; ಮಧ್ಯಾಹ್ನ ಊಟ ಮಾಡಿಸಿ ಮಲಗಿಸಿದ್ದ ಎರಡೂವರೆ ವರ್ಷದ ಕಂದಮ್ಮ ಸಾವು

spot_img
- Advertisement -
- Advertisement -

ಕಡಬ; ಮಧ್ಯಾಹ್ನ ಊಟ ಮಾಡಿಸಿ ಮಲಗಿಸಿದ್ದ ಎರಡೂವರೆ ವರ್ಷದ ಕಂದಮ್ಮ ಸಾವನ್ನಪ್ಪಿರುವ ಮನ ಮಿಡಿಯುವ ಘಟನೆ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಮಾಲ ಎಂಬಲ್ಲಿ ಮಂಗಳವಾರ ನಡೆದಿದೆ.

ಕೊಣಾಜೆ ಮಾಲ ನಿವಾಸಿ ಲಿಂಡೋರಾಜ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿ ರುವ ಉತ್ತರ ಪ್ರದೇಶ ಮೂಲದ ರಾಜಾ ಸಿಂಗ್ ಮತ್ತು ದಿವ್ಯಾಂಶಿ ಸಿಂಗ್ ದಂಪತಿಯ ಎರಡೂವರೆ ವರ್ಷದ ಪುತ್ರ ರುದ್ರ ಪ್ರತಾಪ್ ಸಿಂಗ್ ಮೃತ ಮಗು.

ತಾಯಿ ದಿವ್ಯಾಂಶಿ ಸಿಂಗ್ ಮಗುವಿಗೆ ಮಧ್ಯಾಹ್ನ ಊಟ ಮಾಡಿ ಮಲಗಿಸಿದ್ದರು. ಬಳಿಕ ಮಗುವನ್ನು ಎಬ್ಬಿಸಲು ಹೋದಾಗ ಮಗು ಏಳದೇ ಇದ್ದುದರಿಂದ ತಕ್ಷಣವೇ ಮಗುವನ್ನು ಕಡಬದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಮಗು ಮೃತಪಟ್ಟಿರು ವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮಗು ಆಹಾರ ಸಿಲುಕಿಕೊಂಡು ಅಥವಾ ಯಾವುದೋ ಖಾಯಿಲೆ ಉಲ್ಬಣಗೊಂಡು ಮೃತಪಟ್ಟಿರಬಹುದಾಗಿದ್ದು, ಮಗುವಿನ ಮರಣದಲ್ಲಿ ಯಾವುದೇ ಸಂಶಯವಿಲ್ಲ ಎಂದು ತಾಯಿ‌ ದಿವ್ಯಾಂಶಿ ಸಿಂಗ್ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!