Tuesday, June 9, 2026
Homeಕರಾವಳಿಮಂಗಳೂರು: ಕರ್ತವ್ಯ ನಿರತ ಪೊಲೀಸರಿಗೆ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜು.4ರವರೆಗೆ ನ್ಯಾಯಾಂಗ ಬಂಧನ

ಮಂಗಳೂರು: ಕರ್ತವ್ಯ ನಿರತ ಪೊಲೀಸರಿಗೆ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜು.4ರವರೆಗೆ ನ್ಯಾಯಾಂಗ ಬಂಧನ

- Advertisement -
- Advertisement -

ಮಂಗಳೂರು: ಚಿಲಿಂಬಿಗುಡ್ಡೆ ಬಳಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳಿಗೆ ನ್ಯಾಯಾಲಯವು ಜು. 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಭಾನುವಾರ ತಡರಾತ್ರಿ ಚಿಲಿಂಬಿಗುಡ್ಡೆ ಬಳಿ ಮದ್ಯಪಾನ ಮಾಡಿ ಅನುಚಿತವಾಗಿ ವರ್ತಿಸುತ್ತಿದ್ದ 8ರಿಂದ 10 ಮಂದಿ ಯುವಕರ ಗುಂಪಿನ ಬಳಿ ತೆರಳಿ ವಿಚಾರಿಸಿದ ಪೊಲೀಸರ ಮೇಲೆ ದಾಳಿ ನಡೆದಿತ್ತು.ಓರ್ವ ಯುವಕ ಪೊಲೀಸರ ಮೇಲೆ ಬೈಕ್‌ ಹತ್ತಿಸಲು ಯತ್ನಿಸಿದ್ದ.

ಘಟನೆಯಲ್ಲಿ ಪೊಲೀಸ್‌ ಸಿಬಂದಿ ವೆಂಕಟೇಶ್‌ ಮತ್ತು ಧನಂಜಯ್‌ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಚಿಲಿಂಬಿಗುಡ್ಡೆಯ ದುರ್ಗೇಶ್, ಪ್ರಜ್ವಿತ್‌, ರಕ್ಷಿತ್‌ ಅವರನ್ನು ಬಂಧಿಸಿದ್ದರು.

ಇನ್ನು ಪ್ರಕರಣ ಸಂಬಂಧ ಇತರ ಸುಮಾರು 7 ಮಂದಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಸಂಘಟನೆಯೊಂದಕ್ಕೆ ಸೇರಿದವರೆಂದು ತಿಳಿದುಬಂದಿದೆ.

- Advertisement -

Latest News

error: Content is protected !!