ಮಂಗಳೂರು: ಸೈಬರ್ ವಂಚಕರ ಮಾತಿಗೆ ಮರಳಾಗಿ ಮಹಿಳೆಯೊಬ್ಬರು ಬರೋಬ್ಬರಿ 3.16 ಕೋಟಿ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಬರ್ ವಂಚಕರು ಮಹಿಳೆಗೆ ನಿಮ್ಮ ಗಂಡನ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಪಡೆದು ವಂಚನೆ ಮಾಡಲಾಗಿದೆ ಎಂದು ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ವಂಚಿಸಿದ್ದಾರೆ.
ಜೂನ್ 5ರಂದು ಮುಂಬೈ ಸಹಾರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅನುಶರ್ಮ ಮತ್ತು ಸಬ್ ಇನ್‌ಸ್ಪೆಕ್ಟರ್ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ಕರೆ ಮಾಡಿದ ವಂಚಕರು ನನ್ನ ಮತ್ತು ಪತಿಯ ಬ್ಯಾಂಕ್ ವಿವರ ತನಿಖೆ ಮಾಡುವ ಕಾರಣ ಹೇಳಿ, ಬ್ಯಾಂಕ್ ಖಾತೆ ವಿವರ ಪಡೆದುಕೊಂಡಿದ್ದರು. ನಂತರ ಮತ್ತೆ ಕರೆ ಮಾಡಿದ ಅವರು, ಜೂನ್ 10ರಿಂದ 27ರವರೆಗೆ ನನ್ನ ಮತ್ತು ಪತಿಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಹಾಕಿಸಿಕೊಂಡಿದ್ದಾರೆ. ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಸಿ, ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ’ ಎಂದು ಮಹಿಳೆ ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕರೆ ಮಾಡಿದ ವ್ಯಕ್ತಿಗಳು ನಂತರ ನನ್ನ ನಂಬರ್ ಬ್ಲಾಕ್ ಮಾಡಿದ್ದಾರೆ. ಈ ವಿಷಯವನ್ನು ಮಕ್ಕಳಿಗೆ ತಿಳಿಸಿದಾಗ ಮೋಸ ಹೋಗಿರುವುದು ಅರಿವಿಗೆ ಬಂದಿದೆ’ ಎಂದು ದೂರಿನಲ್ಲಿ ಅವರು ವಿವರಿಸಿದ್ದಾರೆ.
ಮಂಗಳೂರು: ಸೈಬರ್ ವಂಚಕರ ಮಾತಿಗೆ ಮರಳಾಗಿ ಬರೋಬ್ಬರಿ 3.16 ಕೋಟಿ ಕಳೆದುಕೊಂಡ ಮಹಿಳೆ
- Advertisement -
- Advertisement -
- Advertisement -
