ಮೂಡುಬಿದಿರೆ: 2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟವಾಗಿದೆ. ಈ ಬಾರಿ ಶಿವಮೊಗ್ಗದಲ್ಲೂ ಕಂಬಳ ನಡೆಯಲಿರೋದು ವಿಶೇಷವಾಗಿದೆ.
ಮೂಡುಬಿದಿರೆಯಲ್ಲಿ ಆಗಸ್ಟ್ 10 ರಂದು ನಡೆದ ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. 2024-25ನೇ ಸಾಲಿನ ಕಂಬಳ ಸೀಸನ್ ಅಕ್ಟೋಬರ್ 26ರಂದು ಆರಂಭವಾಗಿ 2025ರ ಏಪ್ರಿಲ್ 19ರವರೆಗೆ ನಡೆಯಲಿದೆ.
ಕಂಬಳವನ್ನು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಜತೆಗೆ ಇತರ ಕಡೆಗಳಲ್ಲೂ ಕಂಬಳ ಆಯೋಜನೆಗೆ ಒಲವು ವ್ಯಕ್ತವಾಗಿರುವ ಹಿನ್ನೆಲೆ ಶಿವಮೊಗ್ಗದಲ್ಲಿ ಈ ಬಾರಿ ಕಂಬಳ ನಡೆಸಲು ಅಲ್ಲಿನ ಉದ್ಯಮಿಗಳು, ಕರಾವಳಿ ಭಾಗದ ಪ್ರಮುಖರು ಹಾಗೂ ಇತರರು ಆಸಕ್ತಿ ತೋರಿದ್ದಾರೆ.ಅದರಂತೆ ಈ ಬಾರಿ ಶಿವಮೊಗ್ಗದಲ್ಲಿ ಕಂಬಳ ನಡೆಯಲಿದೆ.
ಇನ್ನ ದೂರದ ಊರಿನಲ್ಲಿ ನಡೆಯುವ ಕಂಬಳಕ್ಕೆ ತೆರಳುವ ಕೋಣಗಳಿಗೆ ಪ್ರಯಾಣದ ಕಾರಣದಿಂದ ವಿಶ್ರಾಂತಿಯ ಅಗತ್ಯವಿರುತ್ತದೆ. ಹಾಗಾಗಿ ಬೆಂಗಳೂರು ಕಂಬಳದ ಬಳಿಕ ಒಂದು ವಾರ ಹೆಚ್ಚುವರಿ ವಿಶ್ರಾಂತಿ ಸಮಯ ನೀಡಲಾಗಿದೆ. ಹಾಗೆಯೇ ಶಿವಮೊಗ್ಗ ಕಂಬಳವನ್ನು ಸೀಸನ್ ನ ಕೊನೆಯಲ್ಲಿ ಮಾಡಲಾಗುತ್ತಿದೆ.ಅಕ್ಟೋಬರ್ 26ರಂದು ಬೆಂಗಳೂರು ಕಂಬಳ ನಡೆಯಲಿದೆ. ಅಂತಿಮ ಕಂಬಳವು ಶಿವಮೊಗ್ಗದಲ್ಲಿ ಅಂದರೆ ಏಪ್ರಿಲ್ 19ರಂದು ನಡೆಯಲಿದೆ.
2024-25ರ ಕಂಬಳ ವೇಳಾಪಟ್ಟಿ ಇಂತಿದೆ.
26-10-2024: ಬೆಂಗಳೂರು
03-11-2024: ವಿಶ್ರಾಂತಿ (ದೀಪಾವಳಿ)
09-11-2024: ಪಿಲಿಕುಳ
16-11-2024: ಕಕ್ಯಪದವು
23-11-2024: ಕೊಡಂಗೆ
30-11-2024: ಬಳ್ಕುಂಜೆ
07-12-2024: ಹೊಕ್ಕಾಡಿಗೋಳಿ
14-12-2024: ಬಾರಾಡಿ ಬೀಡು
21-12-2024: ಮೂಲ್ಕಿ
28-12-2024: ಮಂಗಳೂರು
04-01-2025: ಅಡ್ವೆ-ನಂದಿಕೂರು
11-01-2025: ನರಿಂಗಾನ
18-01-2025: ಮೂಡುಬಿದಿರೆ
25-01-2025: ಐಕಳ ಬಾವ
01-02-2025: ಪುತ್ತೂರು
08-02-2025: ಜೆಪ್ಪು
15-02-2025: ವಾಮಂಜೂರು
22-02-2025: ಕಟಪಾಡಿ
01-03-2025: ಬಂಗಾಡಿ
08-03-2025: ಬಂಟ್ವಾಳ
15-03-2025: ಮಿಯ್ಯಾರು
22-03-2025: ಉಪ್ಪಿನಂಗಡಿ
29-03-2025: ವೇಣೂರು
05-04-2025: ಪಣಪಿಲ
12-04-2025: ಗುರುಪುರ
19-04-2025: ಶಿವಮೊಗ್ಗ