Tuesday, September 26, 2023
Homeಆರಾಧನಾಯುಗಾದಿ 'ಸಂಪ್ರದಾಯ' ಪೂಜಾ ವಿಧಾನ ಹೀಗಿರಲಿ

ಯುಗಾದಿ ‘ಸಂಪ್ರದಾಯ’ ಪೂಜಾ ವಿಧಾನ ಹೀಗಿರಲಿ

- Advertisement -
- Advertisement -

ನಾಡಿನ ಜನ ಸಂಭ್ರದಿಂದ ಆಚರಿಸುವ ಹಬ್ಬ ಯುಗಾದಿ. ಹೊಸ ಬಟ್ಟೆ ತೊಟ್ಟು, ಮನೆಯನ್ನು ಅಲಂಕರಿಸಿ, ಬೇವು-ಬೆಲ್ಲ ತಿಂದ್ರೆ ಹಬ್ಬ ಮುಗಿಯಲಿಲ್ಲ. ಸಂಪ್ರದಾಯದಂತೆ ಹಬ್ಬ ಆಚರಿಸುವವರು ಈಗ್ಲೂ ನಮ್ಮಲ್ಲಿದ್ದಾರೆ.

ಯುಗಾದಿ ಹಬ್ಬವನ್ನು ಸಂಪ್ರದಾಯದಂತೆ ಆಚರಿಸುವವರು ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ನಿತ್ಯ ಕರ್ಮಗಳನ್ನು ಮುಗಿಸಿ ಅಭ್ಯಂಜನ ಸ್ನಾನ ಮಾಡಬೇಕು. ನಂತ್ರ ಹೊಸ ಬಟ್ಟೆ ಧರಿಸಿ ಕೈನಲ್ಲಿ ಹೂ, ಅಕ್ಷತೆ, ಗಂಧ ಹಾಗೂ ನೀರನ್ನು ಹಿಡಿದು ಬ್ರಹ್ಮದೇವನ ಆರಾಧನೆ ಮಾಡಬೇಕು.

ಈ ದಿನ ಸಕಾರಾತ್ಮಕ ಶಕ್ತಿಗಳನ್ನು ಸೆಳೆಯಲು ರಂಗೋಲಿ ಹಾಕಲಾಗುತ್ತದೆ. ರಂಗೋಲಿ, ಅರಿಶಿನ ಹಾಗೂ ಕುಂಕುಮದ ಜೊತೆಗೆ ಒಂದು ಸ್ವಸ್ಥಿಕ ಚಿಹ್ನೆಯನ್ನು ಬಿಡಿಸಬೇಕು. ನಂತ್ರ ವಿಧಿ-ವಿಧಾನದ ಮೂಲಕ ಬ್ರಹ್ಮನ ಮೂರ್ತಿಯನ್ನು ಸ್ಥಾಪನೆ ಮಾಡಿ. ಮೊದಲು ಗಣೇಶಾಂಬಿಕಾ ಪೂಜೆ ಮಾಡಿ ನಂತ್ರ ‘ಓಂ ಬ್ರಹ್ಮಣೇ ನಮಃ’ ಮಂತ್ರವನ್ನು ಜಪಿಸಬೇಕು. ನಂತ್ರ ಹಿರಿಯರಿಗೆ ನಮಸ್ಕರಿಸಿ ಬೇವು-ಬೆಲ್ಲ ತಿಂದು, ಹೋಳಿಗೆ ಊಟ ಮಾಡಬೇಕು.

- Advertisement -
spot_img

Latest News

error: Content is protected !!