Friday, September 29, 2023
Homeಕರಾವಳಿವಿಟ್ಲ: ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

ವಿಟ್ಲ: ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

- Advertisement -
- Advertisement -

ವಿಟ್ಲ : ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧನ ಮಾಡಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೊಡಂಗಾಯಿ ನಿವಾಸಿ ಅಹಮ್ಮದ್‌ ಹನೀಫ್‌ ಯಾನೆ ಹನೀಫ್‌ ಯಾನೆ ಎಲಿ ಹನೀಫ್‌ (46) ಬಂಧಿತ ಆರೋಪಿ.
ಈತ ಪ್ರಕರಣದ ತನಿಖೆಗೆ ಹಾಜರಾಗದೆ ತಲೆಮರೆಸಿಕೊಮಡಿದ್ದು ಈತನ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ೨ ಪ್ರಕರಣಗಳು ದಾಖಲಾಗಿತ್ತು. ಹಾಗೆಯೇ ಗದಗ, ಶಿವಮೊಗ್ಗ, ಬೆಂಗಳೂರು, ಸುಬ್ರಹ್ಮಣ್ಯಪುರಂ, ಚಿಕ್ಕಮಗಳೂರು, ಮೂಡಿಗೆರೆ, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗಳಲ್ಲಿ ಕಳ್ಳತನ, ಹನಿಟ್ಯ್ರಾಫ್‌, ವಂಚನೆ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದವು.

ಈತ ಯಾವ ಠಾಣೆಗೂ ತನಿಖೆಗೆ ಹಾಜರಾಗದೇ ಇದ್ದ ಹಿನ್ನಲೆಯಲ್ಲಿ ಈತನ ವಿರುದ್ಧ ನ್ಯಾಯಾಲಯದಲ್ಲಿ ವಾರಂಟ್‌ ಜಾರಿಯಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿ ಡಾ.ಲಕ್ಷ್ಮೀ ಪ್ರಸಾದ್‌, ಡಿವೈಎಸ್‌ಪಿ ವೆಲೆಂಟನ್‌ ಡಿಸೋಜಾ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್‌ ಅವರ ನೇತೃತ್ವದಲ್ಲಿ ವಿಟ್ಲ ಠಾಣಾಧಿಕಾರಿ ವಿನೋದ್‌ ಎಸ್‌.ಕೆ.ಅವರ ಸೂಚನೆಯಂತೆ ಪೊಲೀಸರಾದ ಪ್ರತಾಪ ರೆಡ್ಡಿ, ಜಯಕುಮಾರ್‌, ವಿನಾಯಕ ಅವರ ತಂಡ ಕಾರ್ಯಾಚರಣೆ ನಡೆಸಿದೆ.

- Advertisement -
spot_img

Latest News

error: Content is protected !!