Thursday, January 21, 2021
Home ಮನರಂಜನೆ ಸಚಿವರ ಔತನಕೂಟಕ್ಕೆ ಕರೆದಾಗ ಬರಲ್ಲ ಎಂದ ವಿದ್ಯಾಬಾಲನ್: ಸಿಲ್ಕ್ ಬ್ಯೂಟಿಗೆ ಆಮೇಲೆ ಕಾದಿತ್ತು ಭರ್ಜರಿ ಶಾಕ್

ಸಚಿವರ ಔತನಕೂಟಕ್ಕೆ ಕರೆದಾಗ ಬರಲ್ಲ ಎಂದ ವಿದ್ಯಾಬಾಲನ್: ಸಿಲ್ಕ್ ಬ್ಯೂಟಿಗೆ ಆಮೇಲೆ ಕಾದಿತ್ತು ಭರ್ಜರಿ ಶಾಕ್

- Advertisement -
- Advertisement -

ಮಧ್ಯಪ್ರದೇಶ : ನಟಿ ವಿದ್ಯಾಬಾಲನ್ ಅವರ ಸಿನಿಮಾದ ಶೂಟಿಂಗ್ ಮಧ್ಯಪ್ರದೇಶದಲ್ಲಿ ನಡೆಯುತ್ತಿತ್ತು. ಹಾಗಾಗಿ ವಿದ್ಯಾ ಅವರನ್ನು ಮಧ್ಯಪ್ರದೇಶದ ಅರಣ್ಯ ಸಚಿವ ವಿಜಯ್ ಶಾ ಊಟಕ್ಕೆ ಆಹ್ವಾನಿಸಿದ್ದರು.ಆದ್ರೆ ಶೂಟಿಂಗ್ ನಲ್ಲಿ ಬ್ಯುಸಿ ಇದ್ದದ್ದರಿಂದ ವಿದ್ಯಾ ಭೋಜನ ಕೂಟಕ್ಕೆ ಬರೋದಕ್ಕೆ ನಿರಾಕರಿಸಿದ್ದಾರೆ. ಆದ್ರೆ ವಿದ್ಯಾ ಬಾಲನ್ ಅವರು ಔತನ ಕೂಟಕ್ಕೆ ಬಂದಿಲ್ಲ ಅನ್ನೋ ಕಾರಣಕ್ಕೆ ಅವರ ಸಿನಿಮಾದ ಶೂಟಿಂಗ್  ತಡೆ ಹಿಡಿಯಲಾಗಿದೆ.

ವಿದ್ಯಾ ಬಾಲನ್ ಭೋಜನಕೂಟಕ್ಕೆ ತೆರಳಿರಲಿಲ್ಲ ಎಂದು ಅರಣ್ಯ ಸಚಿವರು ಮರುದಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣಕ್ಕೆ ತಡೆ ನೀಡಿದ್ದರು ಎನ್ನಲಾಗಿದೆ. ಕೊನೆಗೆ ಚಿತ್ರತಂಡ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ ಬಳಿಕ ಶೂಟಿಂಗ್ ನಡೆಸಲು ಅನುಮತಿ ನೀಡಲಾಗಿದೆ ಎನ್ನಲಾಗಿದೆ.

ವಿದ್ಯಾ ಬಾಲನ್ ನಟಿಸುತ್ತಿರುವ ‘ಶೇರರ್ನಿ’ ಚಿತ್ರೀಕರಣ ಬಾಲಾಘಾಟ್ ನಲ್ಲಿ ನಡೆಯುತ್ತಿದ್ದು, ಚಿತ್ರತಂಡ ಅಕ್ಟೋಬರ್ 20 ರಿಂದ ನವೆಂಬರ್ 21ರ ವರೆಗೆ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಂಡಿತ್ತು. ಶೂಟಿಂಗ್ ಹಿನ್ನೆಲೆ ವಿದ್ಯಾ ಬಾಲನ್ ಮಹಾರಾಷ್ಟ್ರದ ಗೋಂದಿಯಾದಲ್ಲಿ ಉಳಿದುಕೊಂಡಿದ್ದರು. ಸಂಜೆ 5 ಗಂಟೆಗೆ ಸಚಿವ ವಿಜಯ್ ಶಾ ನಟಿಯನ್ನ ಔತಣಕೂಟಕ್ಕೆ ಆಹ್ವಾನಿಸಿದ್ದರು.

ಆದ್ರೆ ವಿದ್ಯಾ ಬಾಲನ್ ಊಟಕ್ಕೆ ತೆರಳಿರಲಿಲ್ಲ. ಮರುದಿನ ಶೂಟಿಂಗ್ ಸ್ಥಳಕ್ಕೆ ಆಗಮಿಸಿ ಜಿಲ್ಲಾ ಅರಣ್ಯಾಧಿಕಾರಿಗಳು ಶೂಟಿಂಗ್ ವಾಹನಗಳನ್ನು ಅರಣ್ಯ ಪ್ರವೇಶಿಸುವದನ್ನ ತಡೆದಿದ್ದರು. ಕೆಲ ಸಮಯದ ಬಳಿಕ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ.

- Advertisement -
- Advertisment -

Latest News

error: Content is protected !!