Monday, May 20, 2024
Homeಕರಾವಳಿಉಡುಪಿಉಡುಪಿ: ಕೊರೊನಾ ವೈರಸ್ ಶಂಕಿತ ಐವರು ಆಸ್ಪತ್ರೆಗೆ ದಾಖಲು

ಉಡುಪಿ: ಕೊರೊನಾ ವೈರಸ್ ಶಂಕಿತ ಐವರು ಆಸ್ಪತ್ರೆಗೆ ದಾಖಲು

spot_img
- Advertisement -
- Advertisement -

ಜ್ವರ, ತಲೆ ನೋವು, ಶೀತ ಗಂಟಲು ನೋವು ಹೊಂದಿರುವ ೫ ಮಂದಿ ಶಂಕಿತ ಕೊರೊನಾ ವೈರಸ್ ತಗುಲಿರುವ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಉಡುಪಿಯ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.
ಈ ಪೈಕಿ ಮೂವರು ದುಬೈ ಪ್ರಯಾಣದ ಇತಿಹಾಸ ಹೊಂದಿದ್ದು, ಈ ಮೂವರು ಜ್ವರ , ಕೆಮ್ಮಿನಿಂದ ಬಳಲುತ್ತಿದ್ದಾರೆ. ಇನ್ನೊಬ್ಬ ಶಂಕಿತ ಸೋಂಕು ಉಳ್ಳ ವ್ಯಕ್ತಿ ಕತಾರ್ ನಿಂದ ಹಿಂತಿರುಗಿದ್ದು, ತಲೆನೋವು ಹಾಗೂ ಜ್ವರದಿಂದ ಬಳಲುತ್ತಿದ್ದಾರೆ. ಮತ್ತೊಬ್ಬರು ಕುವೈತ್ ಪ್ರಯಾಣದ ಇತಿಹಾಸ ಹೊಂದಿದ್ದು, ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದಾರೆ.
ಶಂಕಿತ ಕೊರೊನಾ ವೈರಸ್ ಬಾಧಿತ ಈ ಐವರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!