- Advertisement -
- Advertisement -
ಸವಣಾಲು: ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದು, ಮಾ.25 ರಂದೂ ಕೊರೋನಾ ವೈರಸ್ ಸೋಂಕು ಹರಡಿರುವ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ಕೊರೋನಾ ವೈರಸ್ ನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನ ಸವಣಾಲು ಹಾಲು ಉತ್ಪಾದಕರ ಸೇವಾ ಸಂಘದ ವತಿಯಿಂದ ಎಲ್ಲಾ ಸದಸ್ಯರಿಗೆ ಮತ್ತು ಸ್ಥಳೀಯರಿಗೆ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಂಬಳದಡ್ಡ, ಉಪಾಧ್ಯಕ್ಷೆ ಶ್ರೀಮತಿ ರೀಟಾ, ನಿರ್ದೇಶಕರುಗಳಾದ ದಯಾನಂದ ರೈ ಕಡೆಮಜಲು, ಚಂದಪ್ಪ ಶೆಟ್ಟಿ ಹಂದಿಲಗುತ್ತು, ರಂಜಿತ್ ನಾಯ್ಕ ಕುಕ್ಕುಜೆ, ಶ್ರೀಮತಿ ಮೃದುಲಾ ಕುಂಟಲ್ದಡ್ಡ, ಶ್ರೀಮತಿ ಜಯಂತಿ ಕಟ್ಟದಬೈಲು, ಶ್ರೀಮತಿ ಚಂದ್ರಾವತಿ ಕೊಡಿಮೊಗೆರು, ಹೊನ್ನಪ್ಪ ಹೆಗ್ಡೆ ಬೊಲ್ಲೊಟ್ಟುಬೈಲು, ರಮೇಶ್ ಆಚಾರ್ಯ ನೇರಮೆ, ಕಾರ್ಯದರ್ಶಿ ಹರೀಶ್ ರೈ ಕಡೆಮಜಲು ಮತ್ತು ಸಿಬ್ಬಂದಿ ಸತೀಶ್ ಶೆಟ್ಟಿ ಬಸದಿಗುಡ್ಡೆ ಉಪಸ್ಥಿತರಿದ್ದರು.
- Advertisement -