ನವದೆಹಲಿ: ಭಾರತದಲ್ಲಿ 490 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಈ ನಡುವೆ ಪ್ರಧಾನಿ ಮೋದಿಯವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡುತ್ತ ನಾನು ಇಂದು ಕರೋನವೈರಸ್ ಹರಡುವಿಕೆಯ ವಿರುದ್ಧ ಹೋರಾಡಲು ಮಾತನಾಡಲು ಬಂದಿರುವೆ, ಇನ್ನು ಭಾನುವಾರ ತಾವು ನೀಡಿದ್ದ ‘ಜನತಾ ಕರ್ಫ್ಯೂ’ ಗೆ ಎಲ್ಲಾ ವಯೋಮನದವರು ಬೆಂಬಲ ವ್ಯಕ್ತಪಡಿಸಿದ್ದಕ್ಕೆ, ಧನ್ಯವಾದಗಳನ್ನು ಅರ್ಪಿಸಿದರು. ಇನ್ನು ಕರೋನವೈರಸ್ ಹರಡುವಿಕೆಯ ಬಗ್ಗೆ ನೀವು ವಿವಿಧ ಮಾಧ್ಯಮಗಳಲ್ಲಿ ತಿಳಿದುಕೊಳ್ಳುತ್ತೀದ್ದೀರಾ, ವಿಶ್ವದಲ್ಲೇ ಅತ್ಯಂತ ಪ್ರಭಾವಿ ದೇಶವನ್ನು ಈ ಹೆಮ್ಮಾರಿ ಇನ್ನಿಲ್ಲದ ಹಾಗೇ ಸಮಸ್ಯೆ ಉಂಟು ಮಾಡಿದೆ ಅಂತ ಹೇಳಿದರು.
ಇನ್ನು ಇದರ ವಿರುದ್ದ ಎಲ್ಲರೂ ಒಗಟ್ಟಿನಿಂದ ಹೋರಾಟ ಮಾಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಅಂತ ಹೇಳಿದರು. ಇನ್ನು ಹೆಚ್ಚಿನ ಜನರು ಹೇಳುತ್ತಿರವುದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವುದೇ ಆಗಿದೆ ಅಂತ ಹೇಳುತ್ತಿದ್ದಾರೆ. ಹೀಗಾಗಿ ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವುದೇ ಕರೋನವೈರಸ್ ಹರಡುವಿಕೆಯ ವಿರುದ್ಧ ಹೋರಾಡಲು ನಮಗೆ ಸಹಾಯವಾಗಲಿದೆ ಅಂತ ಹೇಳಿದರು. ಕಳೆದ ಎರಡು ದಿವಸದಿಂದ ದೇಶದ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್‌ಗಳನ್ನು ಮಾಡಲಾಗಿದೆ. ಇನ್ನು ಆರೋಗ್ಯ ಸಲುವಾಗಿ ಇಡೀ ಭಾರತವನ್ನು ಇಂದು ಮಧ್ಯರಾತ್ರಿಯಿಂದ ದೇಶಾದ್ಯಂತ ‘ ಭಾರತ ಲಾಕ್ ಡೌನ್ ಮಾಡಲಾಗುವುದು ಅಂತ ಹೇಳಿದರು. 21 ದಿನಗಳ ಕಾಲ ರಾಷ್ಟ್ರವ್ಯಾಪಿ ಬೀಗ ಹಾಕಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇನ್ನು ಮುಂಬರುವ 21 ದಿನಗಳು ನಮಗೆ ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ, ಕರೋನವೈರಸ್ ಸೋಂಕಿನ ಚಕ್ರವನ್ನು ಮುರಿಯಲು ಕನಿಷ್ಠ 21 ದಿನಗಳ ಸಮಯ ಬಹಳ ಮುಖ್ಯ’ ಎಂದು ಅವರು ಹೇಳಿದರು.
ಕರೋನವೈರಸ್ ಹರಡುವಿಕೆಯ ವಿರುದ್ಧ ಹೋರಾಡಲು 14 ಗಂಟೆಗಳ ಸ್ವಯಂ-ಸಂಪರ್ಕತಡೆಯನ್ನು ಭಾನುವಾರ ಅವರು ‘ಜನತಾ ಕರ್ಫ್ಯೂ’ ಗೆ ಕರೆ ನೀಡಿದ್ದರು. ಅಂದಿನಿಂದ, ಬಹುತೇಕ ಭಾರತವು ಸಂಪೂರ್ಣ ಲಾಕ್ ಡೌನ್ ಆಗಿದೆ, ಪಂಜಾಬ್ನಂತಹ ರಾಜ್ಯಗಳು ಕರ್ಫ್ಯೂ ವಿಧಿಸಿವೆ.
ಲಾಕ್‌ಡೌನ್ ಅನ್ನು ಹಲವರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪ್ರಧಾನಿ ಮೋದಿ ನಿನ್ನೆ ಟ್ವೀಟ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದರು. ‘ಅನೇಕ ಜನರು ಇನ್ನೂ ಲಾಕ್‌ಡೌನ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಯವಿಟ್ಟು ನಿಮ್ಮನ್ನು ಉಳಿಸಿ, ನಿಮ್ಮ ಕುಟುಂಬವನ್ನು ಉಳಿಸಿ, ಸೂಚನೆಗಳನ್ನು ಗಂಭೀರವಾಗಿ ಅನುಸರಿಸಿ. ನಿಯಮಗಳು ಮತ್ತು ಕಾನೂನುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ನಾನು ರಾಜ್ಯ ಸರ್ಕಾರಗಳನ್ನು ವಿನಂತಿಸುತ್ತೇನೆ’ ಎಂದು ಅವರು ಹೇಳಿದ್ದರು.
