- Advertisement -
- Advertisement -
ಮುಂಬೈ, ಮಾ.23: ಕೊರೋನ ವೈರಸ್ ಸೋಂಕಿತರಾಗಿ ಚೇತರಿಸಿಕೊಂಡಿದ್ದ ಫಿಲಿಪ್ಪೈನ್ಸ್‌ನ 68ರ ವಯಸ್ಸಿನ ವ್ಯಕ್ತಿಯೊಬ್ಬರು ಮುಂಬೈನ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಮೂಲಗಳು ತಿಳಿಸಿವೆ. ಮುಂಬೈನಲ್ಲಿ ಕೊರೋನ ವೈರಸ್‌ಗೆ ಸಂಬಂಧಿಸಿ ಮೂರನೇ ವ್ಯಕ್ತಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 15 ಹೊಸ ಕೊರೋನ ವೈರಸ್ ಪ್ರಕರಣ ಬೆಳಕಿಗೆ ಬಂದಿದೆ. ಹೊಸ ಕೇಸ್‌ಗಳ ಪೈಕಿ ಮುಂಬೈನ 14 ಹಾಗೂ ಪುಣೆ 1 ಸೋಂಕುಪೀಡಿತ ಪ್ರಕರಣ ದಾಖಲಾಗಿದೆ.
ವಿಶ್ವದಾದ್ಯಂತ ಕೊರೋನ ವೈರಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿದೆ. ಭಾರತದಲ್ಲಿ 13 ರಾಜ್ಯಗಳು ಹಾಗೂ 80 ಜಿಲ್ಲೆಗಳಲ್ಲಿ ಬಂದ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಸೋಂಕು ಪತ್ತೆ
- Advertisement -
