Thursday, April 25, 2024
Homeಉದ್ಯಮ1,70,000 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರಕಾರ

1,70,000 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರಕಾರ

spot_img
- Advertisement -
- Advertisement -

ನವದೆಹಲಿ : ಇಡೀ ದೇಶವನ್ನು ಲಾಕ್ ಡೌನ್ ಮಾಡಿ 36 ಗಂಟೆಯಾಗಿದೆ. ಹೀಗಿರುವಾಗ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 170 ಕೋಟಿ ಹಣವನ್ನು ದೇಶದ ಜನರಿಗೆ ಹಣವನ್ನು, ಆಹಾರವನ್ನು ನೀಡುವಂತ ಯೋಜನೆ ರೂಪಿಸಲಾಗಿದೆ. ದೇಶದ ಯಾವುದೇ ಜನರು ಹಸಿವಿನಿಂದ ನಲುಗಬಾರದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದರು

ಈ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮೊದಲ ಸಾಲಿನಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಪ್ರತಿ ಆರೋಗ್ಯ ಇಲಾಖೆಯ ನೌಕರರಿಗೆ 15 ಲಕ್ಷದ ವರೆಗೆ ಜೀವ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ.

  • ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ ಆಹಾರ ಒದಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 80 ಸಾವಿರ ಕೋಟಿ ಜನರಿಗೆ ಒಬ್ಬರೋ ಒಬ್ಬರು ಹಸಿವಿನಿಂದ ನಲುಗದಂತೆ 5 ಕೆಜಿ ಅಕ್ಕಿಯ ಜೊತೆಗೆ ಮತ್ತೆ 5 ಕೆಜೆ ಉಚಿತ ಅಕ್ಕಿ, 1 ಕೆಜಿ ಬೇಳೆಯನ್ನು ಮುಂದಿನ ಮೂರು ತಿಂಗಳವರೆಗೆ ಮುಂಗಡವಾಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.
  • ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರು 6 ಸಾವಿರ ಹಣವನ್ನು ನೀಡಲಾಗುತ್ತಿದೆ. ಇದರ ಜೊತೆಗೆ 8.6 ಕೋಟಿ ರೈತರಿಗೆ ರೂ.2000 ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಈ ಮೂಲಕ ಅನ್ನದಾತರ ನೆರವಿಗೆ ನಿಲ್ಲಲಾಗುತ್ತಿದೆ ಎಂಬುದಾಗಿ ತಿಳಿಸಿದರು.
  • 5 ಕೋಟಿ ಜನರಿಗೆ ಮನರೇಗಾ ಯೋಜನೆಯ ಅಡಿಯಲ್ಲಿ ಹಿರಿಯ ನಾಗರೀಕರಿಗೆ, ವಿಧವೆಯರಿಗೆ, ಅಂಗವಿಕಲರಿಗೆ 1000 ಸಾವಿರ ಹಣವನ್ನು ಮೂರು ಕೋಟಿ ಜನರಿಗೆ ನೀಡಲಾಗುತ್ತದೆ.
  • 20 ಕೋಟಿ ಜನಧನ್ ಮಹಿಳಾ ಅಕೌಂಟ್ ಹೊಂದಿರುವವರಿಗೆ 500 ರೂಪಾಯಗಳಂತೆ 3 ತಿಂಗಳವರೆಗೆ ರೂ.1500 ಹಣವನ್ನು ಮನೆಯನ್ನು ನಡೆಸುವ ಸಲುವಾಗಿ ಖಾತೆಗೆ ಜಮೆ ಮಾಡಲಾಗುತ್ತಿದೆ.
  • ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ಸಂಪರ್ಕ 80 ಕೋಟಿ ಬಿಪಿಎಲ್ ಕುಟುಂಬಗಳಿಗೆ 3 ತಿಂಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುತ್ತದೆ. 8.3 ಕೋಟಿ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳು ಪಡೆಯಿದ್ದಾರೆ.
  • ಪಿಎಂ ಗರೀಬ್ ಕಲ್ಯಾಣ ಯೋಜನೆಯಡಿ ಸೆಲ್ಫ್ ಹೆಲ್ಪ್ ಗ್ರೂಪ್ 63 ಲಕ್ಷ ಜನರು 10 ಲಕ್ಷ ಬಡ್ಡಿರಹಿತ ಸಾಲವನ್ನು 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
  • ಕೇಂದ್ರ ಸರ್ಕಾರ ಇಪಿಎಫ್ ಹಣವನ್ನು 100 ಜನರಷ್ಟು ಇರುವ ಸಂಸ್ಥೆಗೆ ಶೇ.24ರಷ್ಟು ಹಣವನ್ನು ನೀಡಲಾಗುತ್ತಿದೆ. ಇದು ಮುಂದಿನ ಮೂರು ತಿಂಗಳ ವರೆಗೆ ನೀಡಲಾಗುತ್ತದೆ.
  • 5 ಕೋಟಿ ರಿಜಿಸ್ಟರ್ ಕಟ್ಟಡಕಾರ್ಮಿಕರಿಗೆ ತಮ್ಮ ಸಹಾಯ ನಿಧಿಯಲ್ಲಿರುವ 31 ಕೋಟಿ ಹಣವನ್ನು ಎಷ್ಟು ಸಾಧ್ಯವೋ ಅಷ್ಟು ಬಳಕೆ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರದ ಸೂಚನೆ

ಈ ಮೊದಲಾದ ವಿಶೇಷ ಪ್ಯಾಕೇಜ್ ಅನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಈ ಮೂಲಕ ದೇಶದಲ್ಲಿ ಲಾಕ್ ಡೌನ್ ಆಗಿದೆ ಅಂತ ಯಾರೂ ಹಸಿವಿನಿಂದ ನಲುಗ ಬಾರದು ಎಂಬುದಾಗಿ ಮನವಿ ಮಾಡಿದರು.

- Advertisement -
spot_img

Latest News

error: Content is protected !!