ಬಿಗ್ ಬಾಸ್ ರಿಯಾಲಿಟಿ ಶೋಗೆ ಬಂದ ನಂತರ ಬಹಳಷ್ಟು ಜನರ ಬದುಕು ಬದಲಾಗಿಬಿಡುತ್ತದೆ.. ಅದೆಷ್ಟೋ ಜನರು ಜೀವನ ಕಟ್ಟಿಕೊಳ್ಳಲು ಬಿಗ್ ಬಾಸ್ ಖ್ಯಾತಿಯನ್ನು ತಂದುಕೊಡುತ್ತದೆ. ಯಾರು ಎಂಬುದೇ ತಿಳಿಯದ ಅದೆಷ್ಟೋ ಮುಖಗಳು ಕರ್ನಾಟಕ ಜನತೆಗೆ ಚಿರಪರಿಚಿತವಾಗಿಬಿಡುತ್ತದೆ.
ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಜನರಿಗೆ ಸಾಕಷ್ಟು ಕುತೂಹಲ ಇದ್ದೇ ಇರುತ್ತದೆ.. ಬಿಗ್ ಬಾಸ್ ಬಳಿಕ ಏನ್ ಮಾಡ್ತಿದ್ದಾರೆ ಎಲ್ಲಿದ್ದಾರೆ ಎಂಬೆಲ್ಲಾ ಪ್ರಶ್ನೆಗಳಿಗೆ ಸಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಗಳ ಮೂಲಕ ಉತ್ತರ ಸಿಗುತ್ತಿರುತ್ತದೆ..

ಅದೇ ರೀತಿ ಇದೀಗ ಬಿಗ್ ಬಾಸ್ ಸೀಸನ್ 3 ರ ಸ್ಪರ್ಧಿ ನೇಹಾ ಗೌಡ ಅವರು ತಾಯಿಯಾಗುತ್ತಿರುವ ಸಂತೋಷವನ್ನು ಹಂಚಿಕೊಂಡಿದ್ದಾರೆ.. ಬಿಗ್ ಬಾಸ್ ಸೀಸನ್ 3 ರಲ್ಲಿ ಮಾಸ್ಟರ್ ಆನಂದ್ ರೆಹಮಾನ್ ಅವರು ಇದ್ದಂತಹ ಸಮಯದಲ್ಲಿ ನೇಹಾ ಗೌಡ ಕೂಡ ಸ್ಪರ್ಧಿಯಾಗಿದ್ದರು..

ಅದಕ್ಕೂ ಮುನ್ನ ಗಗನ ಸಖಿಯಾಗಿ ಕೆಲಸ ಮಾಡುತ್ತಿದ್ದ ನೇಹಾ ಗೌಡ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಹೊಂದಿದ್ದರು.. ಅದೇ ಕಾರಣಕ್ಕೆ ಬಿಗ್ ಬಾಸ್ ನಲ್ಲಿ ಅವಕಾಶವನ್ನೂ ಪಡೆದರು.. ಆದರೆ ಅದೃಷ್ಟ ಕೈ ಹಿಡಿಯಲಿಲ್ಲ ಬಿಗ್ ಬಾಸ್ ನಲ್ಲಿ ಹೆಚ್ಚು ದಿನ ಗಗನಸಖಿ ನೇಹಾ ಗೌಡ ಹಾರಲು ಸಾಧ್ಯವಾಗಲಿಲ್ಲ.. ಬಿಗ್ ಬಾಸ್ ಮನೆಯಿಂದ 5ನೇ ಎಲಿಮಿನೇಷನ್ ನಲ್ಲಿನೇಹಾ ಗೌಡ ಹೊರಬಂದರು..
ಆನಂತರ ಕೆಲ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು.. ಆದರೆ ಅಷ್ಟಾಗಿ ಯಾವುದೂ ಹೆಸರು ತಂದುಕೊಡಲಿಲ್ಲ.. ಆ ಬಳಿಕ ಡ್ಯಾನ್ಸಿಂಗ್ ಸ್ಟಾರ್ ಸೀಸನ್ 3 ರಲ್ಲಿಯೂ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು..
ನಂತರ ತಮ್ಮ ಕಲಾ ಬದುಕಿಗೆ ಪುಲ್ ಸ್ಟಾಪ್ ಇಟ್ಟು.. ಮದುವೆಯಾಗಿ ಪತಿಯೊಡನೆ ವಿದೇಶದಲ್ಲಿ ಸೆಟಲ್ ಆದರು… ಇದೀಗ ಬೇಬಿ ಬಂಪ್ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂತೋಷ ಹಂಚಿಕೊಂಡಿದ್ದಾರೆ..
