Thursday, April 25, 2024
Homeತಾಜಾ ಸುದ್ದಿಲಾಕ್ ಡೌನ್ ನಲ್ಲಿ ಕೆಲಸ ಹೋಯಿತೆಂದು ಮನೆಗೆ ಬಂದ ಅಳಿಯ: ಎರಡು ತಿಂಗಳ ಬಳಿಕ ಅಪ್ರಾಪ್ತ...

ಲಾಕ್ ಡೌನ್ ನಲ್ಲಿ ಕೆಲಸ ಹೋಯಿತೆಂದು ಮನೆಗೆ ಬಂದ ಅಳಿಯ: ಎರಡು ತಿಂಗಳ ಬಳಿಕ ಅಪ್ರಾಪ್ತ ನಾದಿನಿ ಜೊತೆ ಪರಾರಿ

spot_img
- Advertisement -
- Advertisement -

ಭೋಪಾಲ್: ಲಾಕ್‍ಡೌನ್ ನಲ್ಲಿ ಕೆಲಸ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ಮಾವನ ಮನೆ ಬದು ಕೊನೆಗೆ ಎರಡು ತಿಂಗಳ ಬಳಿಕ ತನ್ನ ಪತ್ನಿಯ ಅಪ್ರಾಪ್ತ ತಂಗಿಯ ಜೊತೆ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯ ಪಮರಿಯಾ ಗ್ರಾಮದಲ್ಲಿ ನಡೆದಿದೆ.

ಐದು ವರ್ಷಗಳ ಹಿಂದೆ ಗೌತಮ್ ನಗರದ ಬ್ರಿಜೇಶ್ ಜೊತೆ ರಿಂಕಿ ಮದುವೆ ಆಗಿತ್ತು. ಲಾಕ್‍ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ ಬ್ರಿಜೇಶ್ ಪತ್ನಿ ಜೊತೆ ಮಾವನ ಮನೆ ಸೇರಿದ್ದನು. ಆರ್ಥಿಕ ಸಂಕಷ್ಟ ಹಿನ್ನೆಲೆ ರಿಂಕಿ ಸಹ ತವರು ಮನೆಯಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದರು.

ಕೆಲಸವಿಲ್ಲದೇ ಖಾಲಿ ಕುಳಿತಿದ್ದ ಬ್ರಿಜೇಶ್ ಕಣ್ಣು ಪತ್ನಿಯ ತಂಗಿ ಮೇಲೆ ಬಿದ್ದಿದೆ. ಅಪ್ರಾಪ್ತೆಯಾಗಿದ್ದ ಪತ್ನಿ ತಂಗಿಯನ್ನ ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ. ಈ ಬಗ್ಗೆ ಅತ್ತೆ ಅನುಮಾನ ವ್ಯಕ್ತಪಡಿಸಿದಾಗ ಆಕೆ ನನ್ನ ಸೋದರಿ ಸಮಾನ ಎಂದು ಡೈಲಾಗ್ ಹೊಡೆದಿದ್ದಾನೆ. ಇತ್ತ ರಿಂಕಿ ಸಹ ಪತಿಗೆ ತಂಗಿಯಿಂದ ದೂರವಿರುವಂತೆ ಹೇಳಿದಾಗ ಬೆದರಿಸಿ ಥಳಿಸಿದ್ದಾನೆ.

ಜುಲೈನಲ್ಲಿ ವಾಪಸ್ ಗೌತಮ್ ನಗರಕ್ಕೆ ಬಂದ ಪತ್ನಿ ಜೊತೆಯಲ್ಲಿಯೇ ಇದ್ದನು. ಏಳು ದಿನಗಳ ಹಿಂದೆ ಮತ್ತೆ ಮಾವನ ಮನೆಗೆ ತೆರಳಿ ಪತ್ನಿ ತಂಗಿಯನ್ನ ಬೈಕ್ ಮೇಲೆ ಕರೆದುಕೊಂಡು ಎಸ್ಕೇಪ್ ಆಗಿದ್ದಾನೆ. ಅಳಿಯನ ವಿರುದ್ಧ ನಟೇರನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೂರು ದಿನದ ಬಳಿಕ ಓಡಿ ಹೋಗಿದ್ದ ಜೋಡಿಯನ್ನ ಕರೆದುಕೊಂಡು ಬಂದಿದ್ದಾರೆ. ನಂತ್ರ ರಾಜಿ ಪಂಚಾಯ್ತಿ ಮೂಲಕ ಪ್ರಕರಣ ಇತ್ಯರ್ಥಗೊಳಿಸಲಾಗಿತ್ತು. ಇತ್ತ ಶುಕ್ರವಾರ ರಿಂಕಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

- Advertisement -
spot_img

Latest News

error: Content is protected !!