Tuesday, June 6, 2023
Homeಕರಾವಳಿಉಡುಪಿಅಪಘಾತದಲ್ಲಿ ಮಗ ಸಾವು: ಪೋಷಕರಿಂದ ಮಗನ ಅಂಗಾಂಗ ದಾನ

ಅಪಘಾತದಲ್ಲಿ ಮಗ ಸಾವು: ಪೋಷಕರಿಂದ ಮಗನ ಅಂಗಾಂಗ ದಾನ

- Advertisement -
- Advertisement -

ಮಂಗಳೂರು: ನಗರದ ಲಾಲ್‌ ಬಾಗ್ ನಲ್ಲಿ ಕೆಎಸ್ಆರ್​ಟಿಸಿ ಬಸ್‌ಗೆ ಬೈಕ್ ಡಿಕ್ಕಿಯಾದ ಪರಿಣಾಮ ಖಾಸಗಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಕುಶಾಲ್ ಕುಮಾರ್ (19) ಮೃತಪಟ್ಟಿದ್ದು, ಮೃತ ವಿದ್ಯಾರ್ಥಿಯ ಅಂಗಾಂಗ ದಾನ ಮಾಡಿ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದರು.
ರಾಮನಗರ ಜಿಲ್ಲೆಯ ನಿವಾಸಿ ಕುಶಾಲ್ ಕುಮಾರ್ ನಿನ್ನೆ ಬೆಳಿಗ್ಗೆ ತಾನು ಉಳಿದುಕೊಂಡಿದ್ದ ಪಿಜಿಯಿಂದ ಬೈಕ್‌ನಲ್ಲಿ ಜಿಮ್‌ಗೆಂದು ಲಾಲ್‌ ಬಾಗ್ ಕಡೆ ಹೋಗುತ್ತಿದ್ದಾಗ ಕೆಎಸ್ಆರ್​ಟಿಸಿ ಡಿಪೋದಿಂದ ಬರುತ್ತಿದ್ದ ಬಸ್ ಡಿಕ್ಕಿಯಾಗಿದೆ. ಪರಿಣಾಮ ಕುಶಾಲ್ ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ಕೂಡಲೇ ಸ್ಥಳೀಯರು ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಶಾಲ್ ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಪುತ್ರ ಶೋಕದಲ್ಲೂ ಪೋಷಕರಿಂದ ಅಂಗಾಂಗ ದಾನ:
ಕುಶಾಲ್ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ತಿಳಿಸಿದ್ದರಿಂದ ಆತನ ಕುಟುಂಬ ಅಂಗಾಂಗ ದಾನ ಮಾಡಿದ್ದಾರೆ. ಬೆಂಗಳೂರಿನಿಂದ ವೈದ್ಯರ ತಂಡ ಶುಕ್ರವಾರ ರಾತ್ರಿ ಮಂಗಳೂರಿಗೆ ಆಗಮಿಸಿ ಶಸ್ತ್ರಚಿಕಿತ್ಸೆ ನಡೆಸಿ ಎರಡು ಕಿಡ್ನಿ, ಲಿವರ್, ಹೃದಯ, ಶ್ವಾಸಕೋಶ ಹಾಗು ಕಣ್ಣುಗಳನ್ನು ತೆಗೆದು ಬೆಂಗಳೂರಿಗೆ ತೆರಳಿದ್ದಾರೆ. ಅಂಗಾಂಗ ದಾನ ಪ್ರಕ್ರಿಯೆ ಮುಗಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಯಿತು. ಮಧ್ಯಾಹ್ನ ಮೃತದೇಹವನ್ನು ರಾಮನಗರಕ್ಕೆ ಕೊಂಡೊಯ್ಯಲಾಗಿದೆ. ನಗರದ ಪಾಂಡೇಶ್ವರ ಸಂಚಾರಿ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!