ನವದೆಹಲಿ: ದೇಶದಲ್ಲಿ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಅಗತ್ಯ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 2018-19 ಆರ್ಥಿಕ ವರ್ಷದ ಐಟಿ ರಿಟರ್ನ್ಸ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ಜೂ.30ಕ್ಕೆ ಮುಂದೂಡಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೀಘ್ರವೇ ಆರ್ಥಿಕ ಪ್ಯಾಕೇಜ್ ಪ್ರಕಟಿಸಲಾಗುವುದು ಎಂದರು.
2018-19ನೇ ಸಾಲಿನ ಆದಾಯ ತೆರಿಗೆ ಪಾವತಿಗೆ ಜೂನ್ 30ರ ವರೆಗೆ ಅವಕಾಶ ಕಲ್ಪಿಸಲಾಗುವುದು. ತೆರಿಗೆ ಪಾವತಿ ವಿಳಂಬವಾದರೆ ಶೇ 12ರ ಬದಲಿಗೆ ಶೇ 9ರಷ್ಟು ದಂಡ ವಿಧಿಸಲಾಗುವುದು ಪ್ಯಾನ್ ಗೆ ಆಧಾರ್ ಜೋಡಣೆಯ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಲಾಗುವುದು, ತೆರಿಗೆ ಸಂಬಂಧಿಸಿದ ಎಲ್ಲ ವಿವರಗಳ ಸಲ್ಲಿಕೆಯನ್ನು ವಿಸ್ತರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ವಿವಾದ್ ಸೇ ವಿಶ್ವಾಸ್ ಯೋಜನೆಯನ್ನು ಜೂನ್ 30, 2020ರ ತನಕ ವಿಸ್ತರಣೆ ಮಾಡಲಾಗುವುದು ಟಿಡಿಎಸ್ ಜಮಾ ಅವಧಿ ವಿಸ್ತರಣೆ ಇಲ್ಲ. ಆದರೆ ಬಡ್ಡಿ ದರ ಕಡಿತ ಮಾಡಲಾಗುವುದು ಎಂದರು.
